ಲಂಡನ್: ಸಂಗೀತ, ರಂಗಭೂಮಿ ಮತ್ತು ಸಮಕಾಲೀನ ನೃತ್ಯದಲ್ಲಿ ನವೀನ ಕಾರ್ಯಕ್ರಮಗಳಿಗೆ ಹೆಸರುವಾಸಿಯಾದ ಲಂಡನ್ ಮೂಲದ ಪ್ರತಿಷ್ಠಿತ ಸಂಸ್ಥೆ ಟ್ರಿನಿಟಿ ಲಾಬನ್ ಕನ್ಸರ್ವೇಟೋಯರ್ ಆಫ್ ಮ್ಯೂಸಿಕ್ ಆಂಡ್ ಡ್ಯಾನ್ಸ್ ಗೌರವಾಧ್ಯಕ್ಷರಾಗಿ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ನೇಮಕಗೊಂಡಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ಭಾರತೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿರುವ ರೆಹಮಾನ್, ಐದು ವರ್ಷಗಳ ಅವಧಿಗೆ ಈ ಗೌರವ ಹುದ್ದೆಯನ್ನು ಅಲಂಕರಿಸಲಿದ್ದಾರೆ.
ಪ್ರತಿಷ್ಠಿತ ಸಂಸ್ಥೆ ಟ್ರಿನಿಟಿ ಲಾಬನ್ ನ ಗೌರವಾಧ್ಯಕ್ಷರಾಗಿ ರೆಹಮಾನ್ ಜಾಗತಿಕ ಸಂಗೀತ ಕ್ಷೇತ್ರದಲ್ಲಿ ಅಲೆಗಳನ್ನು ಸೃಷ್ಟಿಸುವುದನ್ನು ಮತ್ತು ಹೊಸ ಪ್ರತಿಭೆಗಳನ್ನು ಪೋಷಿಸುವ ತನ್ನ ಪ್ರಯತ್ನವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.