EBM News Kannada
Leading News Portal in Kannada

ಖ್ಯಾತ ಮಲಯಾಳಂ ನಟ ಮೇಘನಾಥನ್ ನಿಧನ

0



ಕೇರಳ: ಖ್ಯಾತ ಮಲಯಾಳಂ ಚಲನಚಿತ್ರ ನಟ, ಖಳನಾಯಕನ ಪಾತ್ರಗಳಿಗೆ ಹೆಸರುವಾಸಿಯಾಗಿದ್ದ ಮೇಘನಾಥನ್ ಅವರು ನಿಧನರಾಗಿದ್ದಾರೆ.

ಮೇಘನಾಥನ್(60) ಉಸಿರಾಟ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಕೋಝಿಕ್ಕೋಡ್ ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಬೆಳಗಿನ ಜಾವ 2 ಗಂಟೆಗೆ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮೇಘನಾಥನ್ ಹೆಸರಾಂತ ನಟ ಬಾಲನ್ ಕೆ ನಾಯರ್ ಅವರ ಮಗ. ಅವರು ಚಮಯಂ, ಚೆಂಕೋಲ್, ಮತ್ತು ಈ ಪೂಝಯುಂ ಕಡನ್ನು ಸೇರಿದಂತೆ 50 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಮೇಘನಾಥನ್ 1983ರಲ್ಲಿ ಪಿ ಎನ್ ಮೆನನ್ ನಿರ್ದೇಶನದ ಅಸ್ತ್ರಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪನೆ ಮಾಡಿದ್ದು, ಮಲಯಾಳಂ ಚಿತ್ರರಂಗದಲ್ಲಿ ಖಳನಾಯಕನ ಪಾತ್ರಕ್ಕೆ ಹೆಸರುವಾಸಿಯಾಗಿದ್ದಾರೆ.

Leave A Reply

Your email address will not be published.