ಚೆನ್ನೈ: ಖ್ಯಾತ ನಟ ಕಮಲ್ ಹಾಸನ್ ಅವರು ‘ಉಲಗನಾಯಗನ್'(ಸಾರ್ವತ್ರಿಕ ನಾಯಕ) ಎಂದು ನನ್ನನ್ನು ಕರೆಯಬೇಡಿ ಎಂದು ಮನವಿಯನ್ನು ಮಾಡಿಕೊಂಡಿದ್ದು, ನನ್ನನ್ನು ಹೆಸರಿನಿಂದ ಸಂಬೋಧಿಸಬಹುದು ಅಥವಾ ಸರಳವಾಗಿ ʼKHʼ ಎಂದು ಕರೆಯಬಹುದು ಎಂದು ಹೇಳಿಕೊಂಡಿದ್ದಾರೆ.
2018ರಲ್ಲಿ ಸ್ಥಾಪಿತವಾದ ʼಮಕ್ಕಳ್ ನೀಧಿ ಮೈಯಂʼ(Makkal Needhi Maiam) ಪಕ್ಷದ ಸಂಸ್ಥಾಪಕರು ಮತ್ತು ಅಧ್ಯಕ್ಷರಾಗಿರುವ ಕಮಲ್ ಹಾಸನ್, ‘ಉಲಗ ನಾಯಗನ್’ ಎಂಬ ಪ್ರೀತಿಯ ಬಿರುದನ್ನು ನೀಡಿದ್ದಕ್ಕಾಗಿ ಯಾವಾಗಲೂ ಆಳವಾದ ಕೃತಜ್ಞತಾ ಭಾವವನ್ನು ಹೊಂದಿರುವುದಾಗಿ ಹೇಳಿದ್ದಾರೆ. ಇದಲ್ಲದೆ ಈ ಹೆಸರನ್ನು ಗೌರವಯುತವಾಗಿ ನಿರಾಕರಿಸುತ್ತಿದ್ದೇನೆ ಎಂದು ಕಮಲ್ ಹಾಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಮಲ್ ಹಾಸನ್, ಅಭಿಮಾನಿಗಳು, ಚಿತ್ರರಂಗದ ಸದಸ್ಯರು, ಮಾಧ್ಯಮಗಳು, ಪಕ್ಷದ ಕಾರ್ಯಕರ್ತರು ಮತ್ತು ಜನರು ಕೇವಲ ಕಮಲ್ ಹಾಸನ್ ಅಥವಾ ಕಮಲ್ ಅಥವಾ ʼಕೆಎಚ್ʼ ಎಂದು ಕರೆಯಬೇಕು ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ.
ಕಮಲ್ ಹಾಸನ್ ಅವರು ಆರು ದಶಕಗಳಿಂದ ಸಿನಿಮಾ ಕ್ಷೇತ್ರದಲ್ಲಿದ್ದಾರೆ. ಭಾರತೀಯ ಚಿತ್ರರಂಗದ ಅತ್ಯಂತ ಗೌರವಾನ್ವಿತ ನಟರಲ್ಲಿ ಓರ್ವರಾಗಿದ್ದಾರೆ. ಅವರ ಹಲವಾರು ಸಿನಿಮಾಗಳು ಚತ್ರರಂಗದಲ್ಲಿ ಹಿಟ್ ಆಗಿದೆ. ಈ ಕಾರಣದಿಂದಾಗಿ, ಅವರನ್ನು ಕಟ್ಟಾ ಅಭಿಮಾನಿಗಳು ʼಉಲಗನಾಯಗನ್ʼ ಎಂದು ಕರೆಯುತ್ತಿದ್ದರು.
உங்கள் நான்,
கமல் ஹாசன். pic.twitter.com/OpJrnYS9g2
— Kamal Haasan (@ikamalhaasan) November 11, 2024