Viral Video: ಬಸ್ಸಿನಲ್ಲಿಯೇ ಲೈಂಗಿಕ ಕಿರುಕುಳ; ಕಂಡಕ್ಟರ್ ಕೆಳಗಿಳಿಸಿ ಚಪ್ಪಲಿಯಿಂದ ಥಳಿಸಿದ ವಿದ್ಯಾರ್ಥಿನಿಯರು | Kannada Dunia | Kannada News | Karnataka News
10-10-2024 8:27PM IST
/
No Comments /
Posted In: Latest News, India, Live News
ಮಹಾರಾಷ್ಟ್ರದ ರತ್ನಗಿರಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ ಕಾರಣಕ್ಕಾಗಿ ಬಸ್ ಕಂಡಕ್ಟರ್‌ಗೆ ಚಪ್ಪಲಿಯಿಂದ ಥಳಿಸಿರುವ ವಿಡಿಯೋ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ.
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯರು ಚಪ್ಪಲಿಯಿಂದ ಬಸ್ ಕಂಡಕ್ಟರ್ ಗೆ ಥಳಿಸುತ್ತಿದ್ದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಚಲಿಸುತ್ತಿದ್ದ ಬಸ್ಸಿನಲ್ಲಿ ಬಸ್ ಕಂಡಕ್ಟರ್ ಬಾಲಕಿಯರಿಗೆ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ, ನಂತರ ಅವರು ಬಸ್ ಅನ್ನು ನಿಲ್ಲಿಸಿ ಜನರ ಮುಂದೆಯೇ ಥಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕೊಳತುರೆ-ದಾಪೋಲಿ-ರತ್ನಗಿರಿ ಎಸ್‌ಟಿ ಬಸ್‌ನಲ್ಲಿ ಪಂಚನಾಡಿಯ ಜೂನಿಯರ್ ಕಾಲೇಜು ವಿದ್ಯಾರ್ಥಿನಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಬಸ್ ಕಂಡಕ್ಟರ್ ಬಸ್ಸಿನಲ್ಲಿ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಇದಕ್ಕೆ ಧೈರ್ಯಶಾಲಿ ಹುಡುಗಿ ತೀವ್ರವಾಗಿ ಪ್ರತಿಕ್ರಿಯಿಸಿ ಬಸ್ ನಿಲ್ಲಿಸಿದ್ದಲ್ಲದೇ ಕಂಡಕ್ಟರ್ ಅನ್ನು ಕೆಳಗಿಳಿಸಿ ಚಪ್ಪಲಿಯಿಂದ ಥಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಮಹಾರಾಷ್ಟ್ರದ ರತ್ನಗಿರಿಯದ್ದು ಎಂದು ಹೇಳಲಾಗುತ್ತಿದೆ.
ಘಟನೆಯ ನಿಖರವಾದ ಸಮಯ ಮತ್ತು ದಿನಾಂಕ ಇನ್ನೂ ತಿಳಿದಿಲ್ಲ ಮತ್ತು ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ಕ್ರಮದ ವರದಿಗಳಿಲ್ಲ. ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರು ಬಾಲಕಿಯರು ಬಸ್ ಕಂಡಕ್ಟರ್‌ಗೆ ಚಪ್ಪಲಿಯಿಂದ ಥಳಿಸುವ ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡಿದ್ದಾರೆ.