EBM News Kannada
Leading News Portal in Kannada

ಸರ್ಕಾರಿ ಕಾಲೇಜಿನಲ್ಲಿ MBBS ಸೀಟ್‌ ಪಡೆದ ಒಂದೇ ಕುಟುಂಬದ ನಾಲ್ವರು ಸಹೋದರಿಯರು…! | Kannada Dunia | Kannada News | Karnataka News

0


ತೆಲಂಗಾಣದ ಸಿದ್ದಿಪೇಟೆಯಲ್ಲಿ ಒಂದೇ ಕುಟುಂಬದ ನಾಲ್ವರು ಬಾಲಕಿಯರು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಸೀಟು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಪೋಷಕರಾದ ಕೊಂಕ್ ರಾಮಚಂದ್ರಂ ಮತ್ತು ಶಾರದ ತಮ್ಮ ಹೆಣ್ಣು ಮಕ್ಕಳ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಅವರ ಹಿರಿಯ ಮಗಳು, ಮಮತಾ, 2018 ರಲ್ಲಿ MBBS ಸೀಟು ಪಡೆದು ತನ್ನ ಅಧ್ಯಯನವನ್ನು ಪೂರ್ಣಗೊಳಿಸಿ ಈಗ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಎರಡನೇ ಮಗಳು ಮಾಧವಿ 2020 ರಲ್ಲಿ ಎಂಬಿಬಿಎಸ್ ಪ್ರವೇಶ ಪಡೆದಿದ್ದು, ಪ್ರಸ್ತುತ ಪದವಿಯನ್ನು ಮುಂದುವರಿಸುತ್ತಿದ್ದಾರೆ.

ಈ ವರ್ಷ, ಅವರ ಕಿರಿಯ ಪುತ್ರಿಯರಾದ ರೋಹಿಣಿ ಮತ್ತು ರೋಷಿಣಿ ಕೂಡ ಎಂಬಿಬಿಎಸ್ ಸೀಟು ಪಡೆದುಕೊಂಡಿದ್ದಾರೆ. ತಮ್ಮ ಮಕ್ಕಳ ಈ ಯಶಸ್ಸಿಗೆ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಕಾರಣವೆಂದಿರುವ ರಾಮಚಂದ್ರಂ, ಇದರಿಂದಾಗಿ ಸ್ಥಳೀಯವಾಗಿ ಅಧ್ಯಯನ ಮಾಡಲು ಸಾಧ್ಯವಾಯಿತು. ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ನೇತೃತ್ವದಲ್ಲಿ ತಮ್ಮ ಜಿಲ್ಲೆಯಲ್ಲಿ ಸ್ಥಾಪಿಸಲಾದ ವೈದ್ಯಕೀಯ ಕಾಲೇಜಿಗೆ ಕೃತಜ್ಞತೆ ಸಲ್ಲಿಸಿರುವ ದಂಪತಿಗಳು, ಮಾಜಿ ಸಚಿವ ಟಿ ಹರೀಶ್ ರಾವ್ ಅವರನ್ನು ಭೇಟಿ ಮಾಡಿದರು.

ತೆಲಂಗಾಣ ರಚನೆಯು ಇದನ್ನು ಸಾಧ್ಯವಾಗಿಸಿತು ಎಂದು ಅವರು ಹೇಳಿದ್ದು, ಇದರಿಂದಾಗಿ ಸ್ಥಳೀಯ ವಿದ್ಯಾರ್ಥಿಗಳು ಬೇರೆಡೆಗೆ ಹೋಗದೆ ವೈದ್ಯಕೀಯ ಶಿಕ್ಷಣವನ್ನು ಇಲ್ಲಿಯೇ ಪಡೆಯಲು ಅವಕಾಶವಾಗಿದೆ ಎಂದರು.

ರಾಮಚಂದ್ರಂ ಅವರ ನಾಲ್ವರು ಪುತ್ರಿಯರನ್ನು ಅಭಿನಂದಿಸಿದ ಮಾಜಿ ಸಚಿವ ಹರೀಶ್ ರಾವ್, ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ತಮ್ಮ ಹೆತ್ತವರ ಕನಸುಗಳನ್ನು ನನಸಾಗಿಸುವುದು ಅತ್ಯಂತ ಹೆಮ್ಮೆಯ ಕ್ಷಣವಾಗಿದೆ ಎಂದು ಹೇಳಿದರು.

Leave A Reply

Your email address will not be published.