EBM News Kannada
Leading News Portal in Kannada

‘ಸೊಗಡು’ ಹೋಟೆಲ್‌ ನಲ್ಲಿ ‘ನವರಾತ್ರಿ ಥಾಲಿ ಭೋಜನ’ ಸವಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ | Kannada Dunia | Kannada News | Karnataka News

0


ಪ್ರಸ್ತುತ ನಾಡಿನಾದ್ಯಂತ ನವರಾತ್ರಿ ಸಂಭ್ರಮ ಮನೆ ಮಾಡಿದ್ದು, ನಾಡಹಬ್ಬ ದಸರಾಗೆ ಕ್ಷಣಗಣನೆ ಆರಂಭವಾಗಿದೆ. ಇದರ ಮಧ್ಯೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ʼನವರಾತ್ರಿ ಥಾಲಿ ಭೋಜನʼ ಸವಿದಿದ್ದು, ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಿದ್ದಾರೆ.

ಬೆಂಗಳೂರಿನ ರಾಜಾಜಿ ನಗರದಲ್ಲಿ ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಸುಪ್ರಸಿದ್ಧ ‘ಸೊಗಡು’ ಹೋಟೆಲ್‌ ನಲ್ಲಿ ಹಮ್ಮಿಕೊಳ್ಳಲಾಗಿದ್ದ ‘ನವರಾತ್ರಿ ಥಾಲಿ ಭೋಜನ’ ಕೂಟದಲ್ಲಿ ಭಾಗವಹಿಸಿದೆ.‌

ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಹೋಟೆಲ್ ಮಾಲೀಕರಾದ ಸತೀಶ್ ಚಿಪ್ಪಲಕಟ್ಟಿ, ಚಿತ್ರ ನಟರಾದ ಡಾಲಿ ಧನಂಜಯ್, ನಾಗಭೂಷಣ್, ಗಾಯಕ ವಾಸುಕಿ ವೈಭವ್ ಉಪಸ್ಥಿತರಿದ್ದರು ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ತಮ್ಮ ಸೋಷಿಯಲ್‌ ಮೀಡಿಯಾ ಪೋಸ್ಟ್‌ ನಲ್ಲಿ ತಿಳಿಸಿದ್ದಾರೆ.



Leave A Reply

Your email address will not be published.