ಮುಡಾ ಹಗರಣ : ‘ಸಿಎಂ ಸಿದ್ದರಾಮಯ್ಯ’ ವಿರುದ್ದ ಮತ್ತೆ ವಾಗ್ಧಾಳಿ ನಡೆಸಿದ JDS | Kannada Dunia | Kannada News | Karnataka News
03-10-2024 10:28AM IST
/
No Comments /
Posted In: Karnataka, Latest News, Live News
ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ದ ಮತ್ತೆ JDS ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಅವರೇ ಉತ್ತರಿಸಿ… *ಸತ್ತ ಲಿಂಗ ಅಲಿಯಾಸ್ ಜವರನ 3 ಎಕರೆ 16 ಗುಂಟೆ ಜಮೀನನ್ನು ಸುಳ್ಳು ದಾಖಲೆ ಸೃಷ್ಟಿಸಿ ಸ್ವಾಧೀನ ಪಡಿಸಿಕೊಳ್ಳುವ ನಿಮ್ಮ ಆತ್ಮಸಾಕ್ಷಿ “ಸತ್ತು ಹೋಗಿತ್ತೇ” ? *ಪರಿಶಿಷ್ಟರ ಜಮೀನು ಕಬಳಿಸುವಾಗ ನಿಮ್ಮ ಆತ್ಮಸಾಕ್ಷಿ ಅಜ್ಞಾತವಾಸದಲ್ಲಿತ್ತೇ ? ಎಂದು ಕಿಡಿಕಾರಿದ್ದಾರೆ.
2013ರ ಚುನಾವಣಾ ಅಫಿಡವಿಟ್ ನಲ್ಲಿ ನಿಮ್ಮ ಪತ್ನಿ ಬಳಿಯಿರುವ 3 ಎಕರೆ16 ಗುಂಟೆ ಜಮೀನಿನ ಮಾಹಿತಿ ಉಲ್ಲೇಖಿಸದೆ ಮುಚ್ಚಿಟ್ಟು ಚುನಾವಣಾ ಆಯೋಗಕ್ಕೆ ಸುಳ್ಳು ಹೇಳುವಾಗ ತಮ್ಮ ಆತ್ಮಸಾಕ್ಷಿ ಕುರುಡಾಗಿತ್ತೇ? *ಮುಡಾದಲ್ಲಿ ಅಕ್ರಮವಾಗಿ ಪಡೆದ 14 ಸೇಟುಗಳಿಗೆ 62 ಕೋಟಿ ಕೇಳಲು ನಿಮ್ಮ ಆತ್ಮಸಾಕ್ಷಿ ಅನುಮತಿ ಕೊಟ್ಟಿತ್ತೇ ? *ಮುಡಾ ಹಗರಣದಲ್ಲಿ ಎ1 ಆರೋಪಿಯಾದ ಮೇಲೆ 14 ಸೈಟ್ ಸರೆಂಡರ್ ಮಾಡಲು ನಿಮ್ಮ ಆತ್ಮಸಾಕ್ಷಿ ಒಪ್ಪಿತೇ ? *ವಾಲ್ಮೀಕಿ ನಿಗಮದ ಹಣವನ್ನು ಕದ್ದು ಕಳ್ಳಮಾರ್ಗದಲ್ಲಿ ಚುನಾವಣೆಗೆ ಬಳಸಿಕೊಂಡಾಗ ನಿಮ್ಮ ಆತ್ಮಸಾಕ್ಷಿಗೆ ಏನು ಮಾಡುತ್ತಿತ್ತು ಸಿಎಂ ಸಿದ್ದರಾಮಯ್ಯ ? “ಮದ್ಯಪಾನ ಮುಕ್ತ ಸಮಾಜ” ಮಹಾತ್ಮ ಗಾಂಧಿ ಅವರ ಆಶಯ, ಧ್ಯೇಯವಾಗಿತ್ತು. ಆದರೆ ನೀವು ಬಾರ್ & ವೈನ್ ಸ್ಟೂರ್ ಗಳಿಗೆ ಹಣವನ್ನು ಅಕ್ರಮವಾಗಿ ಟ್ರಾನ್ಸ್ ಫರ್ ಮಾಡಿ, “ಹೆಂಡ, ಸಾರಾಯಿ ಹೊಳೆ” ಹರಿಸುವಾಗ ನಿಮ್ಮ ಆತ್ಮಸಾಕ್ಷಿ ಮದ್ಯದ ಅಮಲಿನಲ್ಲಿ ತೇಲಾಡುತ್ತಿತ್ತೇ ? ಆತ್ಮಸಾಕ್ಷಿಯಿಂದ ರಾಜೀನಾಮೆ ಕೊಟ್ಟು ನಿಮ್ಮ ರಾಜಕೀಯ ನೈತಿಕತೆ ಉಳಿಸಿಕೊಳ್ಳಿ. ಸತ್ಯಮಾರ್ಗದಲ್ಲಿ ನಡೆದ ಮಹಾತ್ಮ ಗಾಂಧಿಯವರು ಬರಿಗೈ ಫಕೀರ ! ತಾವು .? ತಮ್ಮ ಆತ್ಮಸಾಕ್ಷಿ ನ್ಯಾಯಾಲಯ ಏನು ಹೇಳುತ್ತದೆ ? ಎಂದು ಕಿಡಿಕಾರಿದ್ದಾರೆ.