ಬಾಂಗ್ಲಾದಲ್ಲಿ ಹಿಂದೂ ಶಿಕ್ಷಕರಿಗೆ ಅವಮಾನ : ಶಾಕಿಂಗ್ ವಿಡಿಯೋ ಹಂಚಿಕೊಂಡ ಇಸ್ಕಾನ್ ಉಪಾಧ್ಯಕ್ಷ | Kannada Dunia | Kannada News | Karnataka News
22-08-2024 4:05PM IST
/
No Comments /
Posted In: Latest News, Live News, International
ಇಸ್ಕಾನ್ ಕೋಲ್ಕತ್ತಾದ ಉಪಾಧ್ಯಕ್ಷ ಮತ್ತು ವಕ್ತಾರ ರಾಧಾರಾಮನ್ ದಾಸ್ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂ ಶಿಕ್ಷಕರಿಗೆ ಎಷ್ಟು ಹಿಂಸೆ ನೀಡಲಾಗ್ತಿದೆ ಎಂಬುದನ್ನು ಈ ವಿಡಿಯೋ ಸ್ಪಷ್ಟಪಡಿಸುತ್ತದೆ. ಮಾಜಿ ವಿದ್ಯಾರ್ಥಿಗಳು, ಹಿಂದೂ ಶಿಕ್ಷಕನ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಶಿಕ್ಷಕನಿಂದ ಬಲವಂತವಾಗಿ ರಾಜೀನಾಮೆ ಪಡೆಯಲಾಗಿದೆ.
ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ರಾಧಾರಾಮನ್ ದಾಸ್, ಬಾಂಗ್ಲಾದೇಶದ ಮತ್ತೊಬ್ಬ ಹಿಂದೂ ಶಿಕ್ಷಕನು ಒಮ್ಮೆ ಕಲಿಸಿದ ಮುಸ್ಲಿಂ ವಿದ್ಯಾರ್ಥಿಗಳಿಂದ ಅವಮಾನಿಸಲ್ಪಟ್ಟಿದ್ದಾರೆ. ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿದೆ ಎಂದು ದಾಸ್ ತಮ್ಮ ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ.
ಬಾಂಗ್ಲಾದೇಶದಲ್ಲಿರುವ ಸಾವಿರಾರು ಹಿಂದೂಗಳಿಗೆ ಪ್ರತಿದಿನ ತಮ್ಮ ಉದ್ಯೋಗಗಳಿಗೆ ರಾಜೀನಾಮೆ ನೀಡುವಂತೆ ಒತ್ತಡ ಹೇರಲಾಗುತ್ತಿದೆ. ಬಾಂಗ್ಲಾದೇಶದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ 2.5 ಮಿಲಿಯನ್ ಹಿಂದೂಗಳನ್ನು ಕೆಲಸದಿಂದ ತೆಗೆಯುವುದು ಅವರ ಗುರಿಯಾಗಿದೆ ಎಂದು ದಾಸ್ ಹೇಳಿದ್ದಾರೆ.
ಇತ್ತೀಚಿನ ರಾಜಕೀಯ ಬದಲಾವಣೆ, ಶೇಖ್ ಹಸೀನಾ ರಾಜೀನಾಮೆ ನಂತ್ರ ಬಾಂಗ್ಲಾದೇಶದಲ್ಲಿ ಅಶಾಂತಿ ನೆಲೆಸಿದೆ. ಯೂನಸ್ – ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾದ ನಂತರ ಅವರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದರು. ಈ ವೇಳೆ ಢಾಕಾ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತ ಗುಂಪುಗಳ ರಕ್ಷಣೆ ಮತ್ತು ಸುರಕ್ಷತೆಗೆ ಆದ್ಯತೆ ನೀಡುವುದಾಗಿ ಯೂನಸ್ ಭರವಸೆ ನೀಡಿದ್ದರು.