EBM News Kannada
Leading News Portal in Kannada

BIGG NEWS : ನಾನು ಬಿಜೆಪಿ ಬಂದ ಮೇಲೆ 4-5 ಬಾರಿ ಸೋತಿದ್ದೇನೆ : ಮಾಜಿ ಸಚಿವ ವಿ. ಸೋಮಣ್ಣ ಮಹತ್ವದ ಹೇಳಿಕೆ | Kannada Dunia | Kannada News | Karnataka News

0


ಮೈಸೂರು : ನಾನು ಬಿಜೆಪಿಗೆ ಬಂದಾಗಿನಿಂದ 4-5 ಬಾರಿ ಸೋತಿದ್ದೇನೆ ಎಂದು ಹೇಳುವ ಮೂಲಕ ಮಾಜಿ ಸಚಿವ ವಿ. ಸೋಮಣ್ಣ ಮತ್ತೊಮ್ಮೆ ಸ್ವಪಕ್ಷದವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 

ಮೈಸೂರಿನಲ್ಲಿ  ಅಖಿಲ ಭಾರತ ವೀರಶೈವ ಮಹಾಸಭಾದಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ವಿ. ಸೋಮಣ್ಣ ಅವರು, ನಾನು ಬಿಜೆಪಿ ಬರುವವರೆಗೆ ಸೋತೇ ಇರಲಿಲ್ಲ. ಬಿಜೆಪಿಗೆ ಬಂದ ಬಳಿಕ 4-5 ಬಾರಿ ಸೋಲನುಭವಿಸಿದ್ದೇನೆ. ಕಾಂಗ್ರೆಸ್ ನಲ್ಲಿ ನಿಂತು ಗೆದ್ದಿದ್ದೇನೆ. 2 ಬಾರಿ ಪಕ್ಷೇತರನಾಗಿ ಗೆದ್ದಿದ್ದೇನೆ. ಆದರೆ ಬಿಜೆಪಿಗೆ ಬಂದು ಸೋತಿದ್ದೇನೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಜಾತಿ ಗಣತಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ. 2015ರಲ್ಲಿ ಜಾತಿ ಗಣತಿ ವರದಿಯನ್ನ ನೋಡಿದ್ರೆ ಆಶ್ಚರ್ಯ ಆಗುತ್ತದೆ. ಈ ಸಮಾಜವನ್ನ ಕವಲುದಾರಿಯಲ್ಲಿ ಹೋಗುವ ಸಾಧ್ಯತೆ ಇದೆ.

Leave A Reply

Your email address will not be published.