EBM News Kannada
Leading News Portal in Kannada

Irrfan Khan Passes Away: ಕ್ಯಾನ್ಸರ್​ನಿಂದ ಬಳಲುತ್ತಿದ್ದ ಬಾಲಿವುಡ್​ ಖ್ಯಾತ ನಟ ಇರ್ಫಾನ್​ ಖಾನ್​ ನಿಧನ

0

ಮುಂಬೈ (ಏ.29): ​ ‘ನ್ಯೂರೋ ಎಂಡೋಕ್ರೈನ್ ಟ್ಯೂಮರ್’ ಕಾಯಿಲೆಯಿಂದ ಬಳಲುತ್ತಿದ್ದ ನಟ ಇರ್ಫಾನ್​ ಖಾನ್ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಇತ್ತೀಚೆಗಷ್ಟೇ ಅವರು ತಾಯಿಯನ್ನು ಕಳೆದುಕೊಂಡಿದ್ದರು.

‘ನ್ಯೂರೋ ಎಂಡೋಕ್ರೈನ್ ಟ್ಯೂಮರ್’ ಇದು ಕ್ಯಾನ್ಸರ್​ನ ಒಂದು ವಿಧವಾಗಿದೆ. ದೇಹದ ವಿವಿಧ ಭಾಗಗಳ ಮೇಲೆ ಪರಿಣಾಮ ಬೀರುವ ಅಪರೂಪದ ಕ್ಯಾನ್ಸರ್ ಇದಾಗಿದೆ. ಈ ಕಾಯಿಲೆಗೆ ಇರ್ಫಾನ್ ಖಾನ್ ಲಂಡನ್​ನಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ಸ್ವಲ್ಪ ಗುಣಮುಖರಾಗಿದ್ದ ಅವರು ಭಾರತಕ್ಕೆ ವಾಪಾಸಾಗಿದ್ದರು. ಆದರೆ, ಈಗ ಮತ್ತೆ ಅವರ ಆರೋಗ್ಯ ಗಂಭೀರವಾಗಿತ್ತು. ಹೀಗಾಗಿ ಸೋಮವಾರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಶನಿವಾರ ಇರ್ಫಾನ್ ಖಾನ್ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇರ್ಫಾನ್​ ತಾಯಿಗೆ 95 ವರ್ಷ ವಯಸ್ಸಾಗಿತ್ತು.. ರಾಜಸ್ಥಾನದ ಜೈಪುರದಲ್ಲಿರುವ ಅವರ ತಾಯಿ ಮೃತಪಟ್ಟಿದ್ದರು. ಅಮ್ಮನನ್ನು ಕಳೆದುಕೊಂಡ ದಿನ ನಟ ಇರ್ಫಾನ್ ಖಾನ್ ಮುಂಬೈಯಲ್ಲಿ ಉಳಿದಿದ್ದರು. ಕೊರೋನಾ ಲಾಕ್​​ಡೌನ್​​ನಿಂದಾಗಿ ಜೈಪುರಕ್ಕೆ ತೆರಳಲಾಗದೆ ವಿಡಿಯೋ ಕರೆಯ ಮೂಲಕ ತಾಯಿಯ ಅಂತ್ಯ ಸಂಸ್ಕಾರವನ್ನು ವೀಕ್ಷಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಇರ್ಫಾನ್​ ಮೃತಪಟ್ಟಿದ್ದಾರೆ.

Leave A Reply

Your email address will not be published.