ಮಂಡ್ಯ ಸದ್ಯಕ್ಕೆ ಸೇಫ್ ಜೋನ್ನಲ್ಲಿದೆ, ಮುಂದೆಯೂ ಎಲ್ಲರೂ ಕಟ್ಟುನಿಟ್ಟಾಗಿ ಮನೆಯಲ್ಲಿ ಇರೋಣ; ಸುಮಲತಾ ಮನವಿ
ಮಂಡ್ಯ: ಕೊರೋನಾ ವೈರಸ್ ತಡೆಗಟ್ಟಲು ಮಂಡ್ಯ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಮಂಡ್ಯದಲ್ಲಿ ಯಾವುದೇ ಕೊರೋನಾ ಪಾಸಿಟೀವ್ ಇಲ್ಲದೆ ನೆಮ್ಮದಿಯಾಗಿ ಇತ್ತು. ಮೊದಲು ಒಂದೇ ಒಂದು ಪಾಸಿಟೀವ್ ಪ್ರಕರಣ ಇರಲಿಲ್ಲ. ಈಗ ಆ ಪರಿಸ್ಥಿತಿ ಇಲ್ಲ. ಮಳವಳ್ಳಿಯಲ್ಲಿ 7 ಪಾಸಿಟಿವ್, ಮಂಡ್ಯದ ಸ್ವರ್ಣಸಂದ್ರದಲ್ಲಿ 1 ಪಾಸಿಟಿವ್ ಪ್ರಕರಣ ಕಂಡು ಬಂದಿದೆ ಎಂದು ಸಂಸದೆ ಸುಮಲತಾ ಅಂಬರೀಷ್ ತಿಳಿಸಿದ್ದಾರೆ.
ಮಂಡ್ಯದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಅವರು, ಜಿಲ್ಲೆಯಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಧಿಕಾರಿಗಳು ಕೈಗೊಂಡಿದ್ದಾರೆ. ಇದರಿಂದ ಸದ್ಯ ಮಂಡ್ಯ ಸೇಫ್ ಜೋನ್ನಲ್ಲಿದೆ. ರೇಡ್ ಜೋನ್ ಗೆ ಬಂದಿಲ್ಲ. ಆದರೂ ಒಂದು ಹಂತದಲ್ಲಿ ಸೇಫ್ ಜೋನ್ ಆಗಿದ್ದೇವೆ. ಮುಂದೆಯೂ ನಾವು ಕಟ್ಟುನಿಟ್ಟಾಗಿ ಇರುವ ಪರಿಸ್ಥಿತಿ ಬರಬಹುದು. ಎಲ್ಲರಿಗೂ ಕಷ್ಟವಾಗುತ್ತಿದೆ, ತೊಂದರೆಯಾಗುತ್ತಿದೆ. ಬೀದಿ ವ್ಯಾಪಾರಿಗಳಿಗೆ, ಕಾರ್ಮಿಕರಿಗೆ ಕಷ್ಟವಾಗುತ್ತಿದೆ . ಅವರಿಗೆ ಅಗತ್ಯ ವಸ್ತುಗಳ ತಲುಪಿಸುವ ಕೆಲಸ ನಡೆಯುತ್ತಿದೆ. ಉಳಿದವರು ಮನೆಯಲ್ಲಿ ಇದ್ದು ಲಾಕ್ ಡೌನ್ ಆದೇಶ ಪಾಲಿಸೋಣ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.