ವಿಜಯಪುರದಲ್ಲಿ ಕೊರೋನಾಗೆ ಮೊದಲ ಬಲಿ; ರಾಜ್ಯದಲ್ಲಿ 9ಕ್ಕೇರಿದ ಸಾವಿನ ಸಂಖ್ಯೆ
ಬೆಂಗಳೂರು(ಏ.14): ರಾಜ್ಯದಲ್ಲಿ ಕೊರೋನಾಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಂದು ಕೊರೋನಾ ಸೋಂಕಿಗೆ ವಿಜಯಪುರದಲ್ಲಿ 69 ವರ್ಷದ ವ್ಯಕ್ತಿ ಬಲಿಯಾಗಿದ್ದು, ಆ ಮೂಲಕ ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಇನ್ನು, ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 258ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನದಲ್ಲಿ 11 ಜನರಿಗೆ ಸೋಂಕು ಹರಡಿದೆ ಎಂದು ಅರೋಗ್ಯ ಇಲಾಖೆ ದೃಢಪಡಿಸಿದೆ. ಇಂದು ಬಾಗಲಕೋಟೆಯಲ್ಲಿ 3 ಕೊರೋನಾ ಪ್ರಕರಣಗಳು, ಚಿಕ್ಕಬಳ್ಳಾಪುರದಲ್ಲಿ ಒಂದು ಪ್ರಕರಣ, ಬೆಂಗಳೂರಿನಲ್ಲಿ 2 ಪ್ರಕರಣಗಳು, ಕಲಬುರಗಿಯಲ್ಲಿ ಮೂರು ಪ್ರಕರಣಗಳು, ವಿಜಯಪುರದಲ್ಲಿ ಒಂದು ಮತ್ತು ಬೆಳಗಾವಿಯಲ್ಲಿ 1 ಪ್ರಕರಣ ಪತ್ತೆಯಾಗಿದೆ.
ರೋಗಿ-248 ಬಾಗಲಕೋಟೆಯ 43 ವರ್ಷದ ವ್ಯಕ್ತಿಗೆ ಸೋಂಕು. P-186 ಮತ್ತು 165 ರ ಸಂಪರ್ಕ ಹೊಂದಿದ್ದು, ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ.
ರೋಗಿ-249 ಬಾಗಲಕೋಟೆಯ 32 ವರ್ಷದ ಮಹಿಳೆಗೆ ಸೋಂಕು. P-186&165 ರ ಸಂಪರ್ಕ ಹೊಂದಿದ್ದು, ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ.
ರೋಗಿ-250 65 ವರ್ಷದ ವ್ಯಕ್ತಿ ಚಿಕ್ಕಬಳ್ಳಾಪುರ ನಿವಾಸಿಯಾಗಿದ್ದು, ತೀವ್ರ ಉಸಿರಾಟದ ತೊಂದರೆ ಇದೆ.. ಬೆಂಗಳೂರಿನಲ್ಲಿ ಚಿಕಿತ್ಸೆ ಮುಂದುವರಿದೆ.ರೋಗಿ-251 ಬಾಗಲಕೋಟೆಯ 39 ವರ್ಷದ ಮಹಿಳೆಗೆ ಸೋಂಕು.. P-125 ರ ಸಂಪರ್ಕ( ನೆರೆಹೊರೆಯವರು) ಹೊಂದಿದ್ದು, ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ.
ರೋಗಿ-252 ಬೆಂಗಳೂರಿನ ನಿವಾಸಿ 65ವರ್ಷದ ವ್ಯಕ್ತಿ ಸೋಂಕು.. ತೀವ್ರ ಉಸಿರಾಟದ ತೊಂದರೆಯಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ‘ನಿಧನ’ ಹೊಂದಿದ್ದಾರೆ..
ರೋಗಿ-253 ಬೆಂಗಳೂರಿನ 26 ವರ್ಷದ ಯುವಕನಿಗೆ ಸೋಂಕು.. ಈತ ಏಪ್ರಿಲ್ 7 ರಂದು ಹಿಂದುಪುರದಿಂದ ದ್ವಿಚಕ್ರ ವಾಹನದಲ್ಲಿ ಪ್ರಯಾಣ ಮಾಡಿರುವ ಹಿನ್ನೆಲೆ ಇದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ.
ರೋಗಿ -254 ಕಲರ್ಬುಗಿ ಯ 10 ವರ್ಷದ ಬಾಲಕಿಗೂ ಸೋಂಕು.. P-177 ರ ಸಂಪರ್ಕ ಹೊಂದಿದ್ದು, ಕಲರ್ಬುಗಿ ಚಿಕಿತ್ಸೆ ಮುಂದುವರಿದೆ.
ರೋಗಿ-255 ಕಲರ್ಬುಗಿಯ 51 ವರ್ಷದ ವ್ಯಕ್ತಿಗೆ ಸೋಂಕು.. P-205 ರ ಸಹೋದರ ನಾಗಿದ್ದು ಸಂಪರ್ಕದಿಂದ ಸೋಂಕು ತಗುಲಿದೆ.. ಕಲರ್ಬುಗಿ ಆಸ್ಪತ್ರೆ ಚಿಕಿತ್ಸೆ ಮುಂದುವರಿದೆ.
ರೋಗಿ-256 ಕಲರ್ಬುಗಿ ಯ 35 ವರ್ಷದ ಮಹಿಳೆಗೆ ಕೊರೋನಾ ಸೋಂಕು.. P-177 ರ ಸಂಪರ್ಕ ಹೊಂದಿದ್ದು, ಕಲರ್ಬುಗಿ ಚಿಕಿತ್ಸೆ ಮುಂದುವರಿದೆ.
ರೋಗಿ-257 ವಿಜಯಪುರದ 69 ವರ್ಷ ವ್ಯಕ್ತಿ ಕರೋನಾ ಸೋಂಕಿಗೆ ಬಲಿ.. ಇದು ವಿಜಯಪುರದಲ್ಲಿ ಮೊದಲ ಬಲಿಯಾಗಿದ್ದು, P-221 ರ ಸಂಪರ್ಕ ಹೊಂದಿದ್ದು( ಪತಿ), ವಿಜಯಪುರ ದ ಆಸ್ಪತ್ರೆಯಲ್ಲೇ ನಿಧನ ಹೊಂದಿದ್ದಾರೆ..
ರೋಗಿ-258 ಬೆಳಗಾವಿಯ 33 ವರ್ಷದ ವ್ಯಕ್ತಿಗೆ ಸೋಂಕು. ದೆಹಲಿಯಿಂದ ಪ್ರಯಾಣ ಮಾಡಿರುವ ಹಿನ್ನೆಲೆ ಹೊಂದಿದ್ದು, ಬೆಳಗಾವಿಯಲ್ಲೇ ಚಿಕಿತ್ಸೆ ಮುಂದುವರಿದೆ.
ಕಳೆದ 24 ಗಂಟೆಯಲ್ಲಿ ಕೊರೋನಾ 3 ಬಲಿ
P-257
69 ವರ್ಷದ ಪುರುಷ, ವಿಜಯಪುರದಲ್ಲಿ ಸಾವನ್ನಪ್ಪಿರುವುದು. P221(60 ವರ್ಷದ ಮಹಿಳೆ-ವಿಜಯಪುರದ ಮೊದಲ ಕೊರೊನಾ ಪ್ರಕರಣ)ರ ಪತಿ.
P-252
65 ವರ್ಷದ ಬೆಂಗಳೂರು ನಿವಾಸಿ ವ್ಯಕ್ತಿ, ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಈತನಿಗೆ ತೀವ್ರ ಉಸಿರಾಟದ ಸೋಂಕು (SARI) ಇತ್ತು.
P-205
ಕಲಬುರಗಿಯ 55 ವರ್ಷದ ಪುರುಷ. ದೆಹಲಿಯಿಂದ ಬಂದಿದ್ದ ವ್ಯಕ್ತಿ. SARI ಇಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.
ಜಿಲ್ಲಾವಾರು ಅಂಕಿ-ಅಂಶ
ಬೆಂಗಳೂರು – 80 ಪ್ರಕರಣ
ಮೈಸೂರು – 48 ಪ್ರಕರಣ
ದಕ್ಷಿಣ ಕನ್ನಡ – 12 ಪ್ರಕರಣ
ಬೆಳಗಾವಿ – 18ಪ್ರಕರಣ
ಉತ್ತರ ಕನ್ನಡ – 9 ಪ್ರಕರಣ
ಚಿಕ್ಕಬಳ್ಳಾಪುರ – 9 ಪ್ರಕರಣ
ಕಲಬುರಗಿ – 16 ಪ್ರಕರಣ
ಬೆಂಗಳೂರು ಗ್ರಾಮಾಂತರ – 05 ಪ್ರಕರಣ
ಬೀದರ್ – 13 ಪ್ರಕರಣ
ದಾವಣಗೆರೆ – 3 ಪ್ರಕರಣ
ಉಡುಪಿ – 3 ಪ್ರಕರಣ
ಬಳ್ಳಾರಿ – 6 ಪ್ರಕರಣ
ಕೊಡಗು – 1 ಪ್ರಕರಣ
ಧಾರವಾಡ – 6 ಪ್ರಕರಣ
ತುಮಕೂರು – 1 ಪ್ರಕರಣ
ಬಾಗಲಕೋಟೆ – 12 ಪ್ರಕರಣ
ಮಂಡ್ಯ – 8 ಪ್ರಕರಣ
ಗದಗ – 1 ಪ್ರಕರಣ
ವಿಜಯಪುರ – 7 ಪ್ರಕರಣ