EBM News Kannada
Leading News Portal in Kannada

ಏಪ್ರಿಲ್ 30ರವರೆಗೆ ವಿಭಿನ್ನ ಲಾಕ್​ಡೌನ್; ಆರ್ಥಿಕ, ಕೃಷಿ ಚಟುವಟಿಕೆಗೆ ಭಂಗ ಇಲ್ಲದಂತೆ ನಿಯಮ: ಬಿಎಸ್​ವೈ

0

ಬೆಂಗಳೂರು(ಏ. 11): ಕೊರೋನಾ ವೈರಸ್ ಸೋಂಕು ತಹಬದಿಗೆ ಬರದ ಹಿನ್ನೆಲೆಯಲ್ಲಿ ಏಪ್ರಿಲ್ 30ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಲು ಸಿಎಂ ಯಡಿಯೂರಪ್ಪ ನಿರ್ಧರಿಸಿದ್ದಾರೆ. ಇವತ್ತು ಪ್ರಧಾನಿ ಮೋದಿ ಅವರ ಜೊತೆ ವಿಡಿಯೋ ಕಾನ್ಫೆರೆನ್ಸ್​ನಲ್ಲಿ ಸಂವಾದದಲ್ಲಿ ಪಾಲ್ಗೊಂಡ ಬಳಿ ಸಿಎಂ ಅವರು ಸುದ್ದಿಗೋಷ್ಟಿ ನಡೆಸಿ ಈ ಈ ವಿಚಾರ ತಿಳಿಸಿದ್ದಾರೆ.

ಪ್ರಧಾನಿ ಜೊತೆ ನಡೆದ ವಿಡಿಯೋ ಸಂವಾದದಲ್ಲಿ ಪ್ರಸ್ತಾಪಿಸಲಾದ ವಿಚಾರಗಳ ಬಗ್ಗೆ ಸಿಎಂ ಯಡಿಯೂರಪ್ಪ ಈ ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡರು. ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಲಾಕ್ ಡೌನ್ ವಿಸ್ತರಣೆಯಾಗಬೇಕೆಂದು ಪ್ರಧಾನಿಗೆ ಸಲಹೆ ನೀಡಿದ್ದರು. ಯಡಿಯೂರಪ್ಪ ಕೂಡ ಇದೇ ವಿಚಾರವನ್ನು ಪ್ರಸ್ತಾಪಿಸಿ ಲಾಕ್ ಡೌನ್ ಮುಂದುವರಿಸುವಂತೆ ಮನವಿ ಮಾಡಿದ್ದರು. ಪ್ರಧಾನಿ ಮೋದಿ ಕೂಡ ಅದಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ. ಬಹುತೇಕ ದೇಶಾದ್ಯಂತ ಲಾಕ್ ಡೌನ್ ವಿಸ್ತರಣೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಸೀಲ್‌ಡೌನ್ ಭಯ; ತಿಂಗಳಿಗಾಗುವಷ್ಟು ಔಷಧ ಖರೀದಿಸುತ್ತಿರುವ ಜನ; ಸೃಷ್ಟಿಯಾಗಿದೆ ಕೃತಕ ಅಭಾವ

ಏಪ್ರಿಲ್ 15ರಿಂದ 30ರವರೆಗೆ ಲಾಕ್ ಡೌನ್ ಬೇರೆ ರೀತಿಯಲ್ಲಿ ಇರಲಿದೆ. ಆರ್ಥಿಕ ಚಟುವಟಿಕೆ ಮತ್ತು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಲಾಕ್ ಡೌನ್ ಇರಬೇಕೆಂದು ಪ್ರಧಾನಿ ತಿಳಿಸಿದ್ದಾರೆ. ಇನ್ನೆರಡು ದಿನದಲ್ಲಿ ಕೇಂದ್ರ ಸರ್ಕಾರವೇ ಮಾರ್ಗಸೂಚಿ ನೀಡಲಿದೆ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದ್ಧಾರೆ.

ವಿವಿಧ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ಸುಮಾರು 4 ಗಂಟೆ ಕಾಲ ವಿಡಿಯೋ ಕಾನ್ಫೆರೆನ್ಸ್​ನಲ್ಲಿ ಮಾತನಾಡಿದರು. ಈ ವೇಳೆ, ಕರ್ನಾಟಕ ರಾಜ್ಯದಲ್ಲಿ ಕೈಗೊಳ್ಳಲಾಗಿರುವ ಕಟ್ಟುನಿಟ್ಟಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಪ್ರಧಾನಿ ಸಮಾಧಾನ ಪಟ್ಟಿದ್ದಾರೆ. ಯಡಿಯೂರಪ್ಪ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೆನ್ನಲಾಗಿದೆ.

ಕೃಷಿಕರು ಬೆಳೆದ ಯಾವುದೇ ಉತ್ಪನ್ನಕ್ಕೂ ಸರಿಯಾದ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುವುದು. ರಾಜ್ಯದ ಯಾವುದೇ ಟೋಲ್​ನಲ್ಲೂ ರೈತರ ಉತ್ಪನ್ನಗಳನ್ನು ತಡೆಯುವಂತಿಲ್ಲ. ತಡೆದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ರಾಜ್ಯಾದ್ಯಂತ ಜನರು ತಮ್ಮ ನಿತ್ಯದ ವಸ್ತುಗಳ ಖರೀದಿಗೆ ಮನೆಯಿಂದ ಒಬ್ಬರು ಮಾತ್ರ ಹೊರಗೆ ಹೋಗಲು ಅವಕಾಶ ಇರುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಲಾಕ್​ಡೌನ್ ವಿಸ್ತರಣೆ ವಿಷಯವಾಗಿ ಪ್ರಧಾನಿ ಸರಿಯಾದ ನಿರ್ಧಾರ ಮಾಡಿದ್ದಾರೆ; ಸಿಎಂ ಕೇಜ್ರಿವಾಲ್ಇನ್ನು, ಶಾಲಾ ಕಾಲೇಜುಗಳ ಪರಿಸ್ಥಿತಿಗೆ ಏನು ಎಂಬ ಪ್ರಶ್ನೆಗೆ, ಸಿಎಂ ಅದೆಲ್ಲಾ ಕೇಂದ್ರದಿಂದ ಮಾರ್ಗದರ್ಶಿ ಸೂಚಿ ಬಂದ ನಂತರ ತೀರ್ಮಾನ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮದ್ಯದಂಗಡಿಗಳನ್ನು ತೆರೆಯಬೇಕೋ ಬೇಡವೋ ಎಂಬುದು ಇನ್ನೆರಡು ದಿನದಲ್ಲಿ ನಿರ್ಧಾರವಾಗಲಿದೆ.

ಹಂತ ಹಂತವಾಗಿ ಲಾಕ್ ಡೌನ್ ಸಡಿಲಗೊಳಿಸಬೇಕು ಎಂದು ರಾಜ್ಯದ ತಜ್ಞರ ಸಮಿತಿ ಅಭಿಪ್ರಾಯಪಟ್ಟಿತ್ತು. ಆದರೆ, ಸೋಂಕು ಕಡಿಮೆಯಾಗದಿರುವುದರಿಂದ ಲಾಕ್ ಡೌನ್ ಮುಂದುವರಿಸಬೇಕೆಂದು ರಾಷ್ಟ್ರಾದ್ಯಂತ ಒಮ್ಮತದ ಅಪೇಕ್ಷೆ ಕೇಳಿಬಂದಿದೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಲಾಕ್ ಡೌನ್ ಸಡಿಲಗೊಳಿಸಬಾರದು ಎಂದು ಸಲಹೆ ನೀಡಿದೆ.

ಏಪ್ರಿಲ್ 14ರ ನಂತರದ ಎರಡು ವಾರಗಳಲ್ಲಿ ಲಾಕ್ ಡೌನ್ ಯಾವ ರೀತಿ ಇರಬಹುದು ಎಂದು ಕೇಂದ್ರ ಸರ್ಕಾರ ಇನ್ನೆರಡು ದಿನದಲ್ಲಿ ಮಾರ್ಗದರ್ಶಿ ಸೂಚಿ ಬಿಡುಗಡೆ ಮಾಡಲಿದೆ.

Leave A Reply

Your email address will not be published.