EBM News Kannada
Leading News Portal in Kannada

ಕ್ಯಾನ್ಸರ್​ ಪೀಡಿತರಿಗೆ ತಲೆ ಕೂದಲನ್ನು ದಾನ ಮಾಡಿದ ಸ್ಯಾಂಡಲ್​ವುಡ್​ ನಟಿ!

0

ಮಹಾಮಾರಿ ಕೊರೋನಾ ವೈರಸ್​ ಹಾವಳಿ ದಿನ ದಿನದಿಂದಕ್ಕೆ ಹೆಚ್ಚಾಗುತ್ತಿದೆ. ಏ 14 ರವರೆಗೆ ದೇಶ ಲಾಕ್​ ಡೌನ್​ ಆದೇಶವನ್ನು ಪಾಲಿಸುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸೆಲೆಬ್ರಿಟಿಗಳು, ಸ್ಟಾರ್​ ನಟ-ನಟಿಯರು ನಿರ್ಗತಕರಿಗೆ ಸಹಾಯ ಮಾಡುತ್ತಿದ್ದಾರೆ. ಇತ್ತ ಸ್ಯಾಂಡಲ್​ವುಡ್​ ನಟಿಯೊಬ್ಬರು ತಮ್ಮ ತಲೆ ಕೂದಲನ್ನು ಕತ್ತರಿಸುವ ಮೂಲಕ ಕ್ಯಾನ್ಸರ್​ ಪೀಡಿತರಿಗೆ ದಾನ ಮಾಡಿದ್ದಾರೆ.

ನಟಿ ಸುಕೃತಾ ವಾಗ್ಲೆ ತಮ್ಮ ತಲೆ ಕೂದಲನ್ನು ಕಾನ್ಸರ್​ ಪೀಡಿತರಿಗೆ ದಾನ ಮಾಡಿದ್ದಾರೆ. ಕೊರೋನಾದಿಂದಾಗಿ ಮನೆಯಲ್ಲಿ ಇರುವ ಸುಕೃತ ವಾಗ್ಲೆ ತಮ್ಮ ತಲೆ ಕೂದಲು ಕ್ಯಾನ್ಸರ್​ ಪೀಡಿತರಿಗೆ ಉಪಯೋಗಕ್ಕೆ ಬರಲಿ ಎಂದು ಕತ್ತರಿಸಿ ಕೊಂಡಿದ್ದಾರೆ. ಮಾತ್ರವಲ್ಲದೆ, ಕೂದಲು ಕತ್ತರಿಸುವ ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅನೇಕರು ಈ ವಿಡಿಯೋ ನೋಡಿ ನಟಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.