ಅಕ್ಬರ್ ಅಲ್ಲ, ಮಹಾರಾಣ ಪ್ರತಾಪ್ ಗ್ರೇಟ್; ಸಿಎಂ ಯೋಗಿ ಆದಿತ್ಯನಾಥ್
ಲಖನೌ; ಅಕ್ಬರ್ ಅಲ್ಲ, ಮೋವಾರ ರಾಜ ಮಹಾರಾಣ ಪ್ರತಾಪ್ ಅತ್ಯಂತ ದೊಡ್ಡ ವ್ಯಕ್ತಿ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗುರುವಾರ ಹೇಳಿದ್ದಾರೆ.
ಮೇವಾರ ರಾಜ ಮಹಾರಾಣ ಪ್ರತಾಪ್ ಸಿಂಗ್ ಅವರ ಜನ್ಮದಿನಾಚರಣೆಯ ಅಂಗವಾಗಿ ಆರ್’ಎಸ್ಎಸ್ ನಡೆಸಿದ ಸಮಾರಂಭದಲ್ಲಿ ಮಾತನಾಡಿರುವ ಅವರು, ಮಹಾರಾಣ ಪ್ರತಾಪ್ ಸಿಂಗ್ ಅವರನ್ನು ಕೊಂಡಾಡಿದ್ದಾರೆ.
ಅರಾವಳಿ ಬೆಟ್ಟದಲ್ಲಿದ್ದುಕೊಂಡೇ ಹಲವು ವರ್ಷಗಳ ಕಾಲ ಮಹಾರಾಣ ಪ್ರತಾಪ್ ಸಿಂಗ್ ಅವರು ಹೋರಾಟ ಮಾಡಿದ್ದರು. ಬಳಿಕ ಕೊನೆಗೂ ಗೆಲವು ಸಾಧಿಸಿದ್ದರು ಎಂದು ಹೇಳಿರುವ ಯೋಗಿ ಆದಿತ್ಯನಾಥ್ ಅವರು, ಅಕ್ಬರ್’ನನ್ನು ಮಹಾರಾಣ ಪ್ರತಾಸ್ ಸಿಂಗ್ ಎಂದಿಗೂ ರಾಜನೆಂದು ಒಪ್ಪಿಕೊಂಡಿರಲಿಲ್ಲ.
ಟರ್ಕಿ ಜನರನ್ನು ನಂಬುವುದಿಲ್ಲ ಎಂದು ಹೇಳುತ್ತಿದ್ದ ಮಹಾರಾಣ ಪ್ರತಾಸ್ ಸಿಂಗ್ ಅವರು, ಎಂದಿಗೂ ಮೊಘಲ್ ಚರ್ಕವರ್ತಿಯನ್ನು ತಮ್ಮ ದೊರೆಯೆಂದು ಒಪ್ಪಿಕೊಂಡಿರಲಿಲ್ಲ.
1576ರ ಹಲ್ದಿಘಾಟಿ ಯುದ್ಧದಲ್ಲಿ ಯಾರು ಗೆದ್ದರು ಅಥವಾ ಯಾರು ಸೋತರು ಎಂಬುದು ಮುಖ್ಯವಾಗುವುದಿಲ್ಲ. ಆತ್ಮ ಗೌರವಕ್ಕಾಗಿ ಅರಾವಳಿ ಬೆಟ್ಟದಲ್ಲಿಯೇ ನಿಂತು ಪ್ರತಾಪ್ ಸಿಂಗ್ ಹಲವು ವರ್ಷಗಳ ಕಾಲ ಹೋರಾಟ ಮಾಡಿದ್ದರು. ಹೋರಾಟ ಕೇವಲ ಒಂದು ದಿನದ ಮಾಡುವಂತಹದ್ದಲ್ಲ, ಹಲವು ವರ್ಷಗಳ ಮಾಡುವಂತಹದ್ದು ಎಂಬುದಕ್ಕೆ ಮಹಾರಾಣ ಪ್ರತಾಪ್ ಅವರು ಉತ್ತಮ ಉದಾಹರಣೆಯಾಗಿದ್ದಾರೆ. ತನ್ನ ಸಾಮ್ರಾಜ್ಯವನ್ನು ಗೆದ್ದುಕೊಳ್ಳುವ ಮೂಲಕ ಅಕ್ಬರ್ ಅಲ್ಲ, ತಾವೇ ದೊಡ್ಡ ವ್ಯಕ್ತಿ ಎಂಬುದನ್ನು ಮಹಾರಾಣಾ ಪ್ರತಾಪ್ ಅವರು ಸಾಬೀತುಪಡಿಸಿದ್ದಾರೆಂದು ತಿಳಿಸಿದ್ದಾರೆ.