ಪರ್ವೇಜ್ ಮುಷರಫ್ ನ ಪಾಸ್ಪೋರ್ಟ್ ಹಾಗೂ ಗುರುತಿನ ಚೀಟಿಯನ್ನು ಬ್ಲಾಕ್ ಮಾಡಲಿರುವ ಪಾಕಿಸ್ತಾನ
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಪರ್ವೇಜ್ ಮುಷರಫ್ ಅವರ ಪಾಸ್ಪೋರ್ಟ್ ಹಾಗೂ ಗುರುತಿನ ಚೀಟಿಯನ್ನು ಬ್ಲಾಕ್ ಮಾಡುವಂತೆ ಪಾಕಿಸ್ತಾನದ ಆಂತರಿಕ ಸಚಿವಾಲಯ ಸೂಚನೆ ನೀಡಿದ.
ವಿಶೇಷ ನ್ಯಾಯಾಲಯದ ಆದೇಶದ ಪ್ರಕಾರ ಸಚಿವಾಲಯ ಮೇ.31 ರಂದು ಈ ಆದೇಶ ನೀಡಿದ್ದು, ರಾಷ್ಟ್ರೀಯ ಡೇಟಾಬೇಸ್ ಮತ್ತು ನೋಂದಣಿ ಪ್ರಾಧಿಕಾರ, ವಲಸೆ ಮತ್ತು ಪಾಸ್ಪೋರ್ಟ್ಗಳ ನಿರ್ದೇಶನಾಲಯಕ್ಕೆ ಪರ್ವೇಜ್ ಮುಷರಫ್ ಗೆ ಸಂಬಂಧಿಸಿದ ಪಾಸ್ಪೋರ್ಟ್ ಹಾಗೂ ಗುರುತಿನ ಚೀಟಿಯನ್ನು ಅಮಾನತು ಮಾಡುವಂತೆ ಸೂಚನೆ ನೀಡಿದೆ.
ಗುರುತಿನ ಚೀಟಿ, ಪಾಸ್ಪೋರ್ಟ್ ಗಳನ್ನು ವಶಪಡಿಸಿಕೊಂಡಾದ ನಂತರ ಪರ್ವೇಜ್ ಮುಷರಫ್ ನ ಬ್ಯಾಂಕ್ ಖಾತೆಗಳನ್ನೂ ನಿಷ್ಕ್ರಿಯಗೊಳಿಸಿ ವಿದೇಶಕ್ಕೆ ತೆರಳದಂತೆಯೂ ನಿರ್ಬಂಧ ವಿಧಿಸಲಾಗುತ್ತದೆ. ಇದೇ ವೇಳೆ ಕೋರ್ಟ್ ಮುಷರಫ್ ನ ಬಂಧನಕ್ಕೂ ಸೂಚನೆ ನೀಡಿದ್ದು, ವಿದೇಶದಲ್ಲಿರುವ ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಸೂಚಿಸಿದೆ.