ಮೋದಿ ನೇತೃತ್ವದಲ್ಲಿ ಭಾರತ ಆಕ್ರಮಣಕಾರಿ ನೀತಿ ಅಳವಡಿಸಿಕೊಂಡಿದೆ: ಪಾಕ್ ಅಳಲು
ಇಸ್ಲಾಮಾಬಾದ್: ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಭಾರತ ಆಕ್ರಮಣಕಾರಿ ಮನಸ್ಥಿತಿ ಹಾಗೂ ವರ್ತನೆಗಳನ್ನು ಅಳವಡಿಸಿಕೊಂಡಿದೆ ಎಂದು ಪಾಕಿಸ್ತಾನ ಆರೋಪಿಸಿದೆ.
ಪಾಕಿಸ್ತಾನದ ವಿರುದ್ಧ ಭಾರತ ಆಕ್ರಮಣಕಾರಿ ನೀತಿಯನ್ನು ಅಳವಡಿಸಿಕೊಂಡಿದೆ ಎಂದು ಪಾಕಿಸ್ತಾನದ ನಿರ್ಗಮಿತ ರಕ್ಷಣಾ ಸಚಿವ ಖುರಾಮ್ ದಸ್ತಗಿರ್ ಖಾನ್ ಹೇಳಿದ್ದಾರೆ. ಭಾರತದ ವಿರುದ್ಧ ಕದನ ವಿರಾಮ ಉಲ್ಲಂಘನೆಯನ್ನು ಹೆಚ್ಚಿಸುತ್ತಿರುವ ಆರೋಪವನ್ನೂ ಮಾಡಿರುವ ಖಾನ್, ಭಾರತ ಎಷ್ಟೇ ಆಕ್ರಮಣಕಾರಿಯಾದರೂ ಕಾಶ್ಮೀರದ ಜನತೆಗೆ ಪಾಕಿಸ್ತಾನ ಬೆಂಬಲ ನೀಡುವುದನ್ನು ಮುಂದುವರೆಸುತ್ತದೆ ಎಂದು ಹೇಳಿದೆ.
2003 ರ ಕದಾನ ವಿರಾಮ ಉಲ್ಲಂಘನೆಯ ಒಪ್ಪಂದವನ್ನು ಪೂರ್ಣವಾಗಿ ಜಾರಿಗೆ ತರುವುದಕ್ಕೆ ಸಂಬಂಧಿಸಿದಂತೆ ಸೇನಾ ಕಾರ್ಯಾಚರಣೆಗೆ ಸಂಬಂಧಿಸಿದ ಉಭಯ ರಾಷ್ಟ್ರಗಳ ಡಿಜಿಗಳೂ ತೀರ್ಮಾನಿಸಿದ ಬೆನ್ನಲ್ಲೇ ಪಾಕಿಸ್ತಾನ ಭಾರತದ ವಿರುದ್ಧ ಆರೋಪ ಮಾಡಿದೆ.