ಚೆನ್ನೈ: ಎಎಫ್‌ಸಿ ಏಶ್ಯನ್ ಕಪ್-2027 ಜನವರಿ 7ರಿಂದ ಆರಂಭವಾಗಲಿದ್ದು, ಫೆಬ್ರವರಿ 5ರ ತನಕ ನಡೆಯಲಿದೆ ಎಂದು ಏಶ್ಯನ್ ಫುಟ್ಬಾಲ್ ಫೆಡರೇಶನ್(ಎಎಫ್‌ಸಿ)ಮಂಗಳವಾರ ಪ್ರಕಟಿಸಿದೆ.
ಕಾಂಟಿನೆಂಟಲ್ ಟೂರ್ನಮೆಂಟ್‌ನ ಆತಿಥ್ಯಕ್ಕೆ ಐದು ಕ್ರೀಡಾಂಗಣಗಳನ್ನು ಖಚಿತಪಡಿಸಲಾಗಿದೆ.
ಭಾರತ ತನ್ನ ಬಿಡ್ ಅನ್ನು ಹಿಂಪಡೆದ ನಂತರ 2023ರಲ್ಲಿಯೇ ಸೌದಿ ಅರೇಬಿಯವು 2027ರ ಆವೃತ್ತಿಯ ಏಶ್ಯನ್ ಕಪ್ ಆಯೋಜಿಸಲಿದೆ ಎಂದು ಪ್ರಕಟಿಸಲಾಗಿದೆ. ಈ ಹಿಂದಿನ ಆವೃತ್ತಿಯ ಏಶ್ಯನ್ ಕಪ್‌ಗೆ ಖತರ್ ಆತಿಥ್ಯವಹಿಸಿತ್ತು.
ಎಎಫ್‌ಸಿ ಏಶ್ಯನ್ ಕಪ್ ಸೌದಿ ಅರೇಬಿಯಾ-2027ಕ್ಕಾಗಿ ದಿನಾಂಕಗಳನ್ನು ದೃಢೀಕರಿಸುವುದು ಹಾಗೂ ಕ್ರೀಡಾಂಗಣಗಳನ್ನು ಆಯ್ಕೆ ಮಾಡುವುದು ಪಂದ್ಯಾವಳಿಯನ್ನು ಆಯೋಜಿಸುವ ನಮ್ಮ ಪ್ರಯಾಣದಲ್ಲಿ ಒಂದು ಕಾರ್ಯತಂತ್ರದ ಮೈಲಿಗಲ್ಲು ಎಂದು ಸೌದಿ ಅರೇಬಿಯದ ಫುಟ್ಬಾಲ್ ಒಕ್ಕೂಟದ ಅಧ್ಯಕ್ಷ ಯಾಸಿರ್ ಅಲ್ ಮಿಸೆಹಲ್ ಹೇಳಿದ್ದಾರೆ.
18 ತಂಡಗಳು ಈಗಾಗಲೇ ತಮ್ಮ ಸ್ಥಾನವನ್ನು ಖಚಿತಪಡಿಸಿವೆೆ. ಮೂರನೇ ಸುತ್ತಿನ ಅರ್ಹತಾ ಪಂದ್ಯಗಳು ಈ ವರ್ಷದ ಮಾರ್ಚ್‌ನಲ್ಲಿ ಆರಂಭವಾಗಲಿದೆ. ಭಾರತ ತಂಡವು ಸಿಂಗಾಪುರ, ಹಾಂಕಾಂಗ್ ಹಾಗೂ ಬಾಂಗ್ಲಾದೇಶದೊಂದಿಗೆ ಸಿ ಗುಂಪಿನಲ್ಲಿ ಸ್ಥಾನ ಪಡೆದಿದೆ.