ಜೈಪುರ : ಈಗ ನಡೆಯುತ್ತಿರುವ ಸಯ್ಯದ್ ಮುಷ್ತಾಕ್ ಅಲಿ ಟಿ-20 ಟ್ರೋಫಿ ಟೂರ್ನಿಯಲ್ಲಿ ಬಲಿಷ್ಠ ಮಧ್ಯ ಪ್ರದೇಶ ತಂಡವನ್ನು ಮಣಿಸಿರುವ ರಾಜಸ್ಥಾನ ತಂಡ ಸತತ 5ನೇ ಗೆಲುವು ದಾಖಲಿಸಿದೆ.
ನೂತನ ನಾಯಕ ಮಹಿಪಾಲ್ ಲಾಮ್ರೊರ್ ನೇತೃತ್ವದಲ್ಲಿ ಆಡಿದ ರಾಜಸ್ಥಾನ ತಂಡವು ಇನ್ನೂ 22 ಎಸೆತಗಳು ಬಾಕಿ ಇರುವಾಗಲೇ ಮಧ್ಯಪ್ರದೇಶ ತಂಡವನ್ನು 6 ವಿಕೆಟ್ಗಳ ಅಂತರದಿಂದ ಮಣಿಸಿ ಎ ಗುಂಪಿನಲ್ಲಿ ಅಜೇಯ ದಾಖಲೆ ಮುಂದುವರಿಸಿದೆ. ಸತತ 5ನೇ ಜಯ ದಾಖಲಿಸಿರುವ ರಾಜಸ್ಥಾನ ತಂಡ 20 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ.
ರಾಜಸ್ಥಾನದ ಬೌಲರ್ಗಳು ಮೊದಲಿಗೆ ಮಧ್ಯಪ್ರದೇಶ ತಂಡವನ್ನು 8 ವಿಕೆಟ್ಗೆ 139 ರನ್ಗೆ ನಿಯಂತ್ರಿಸಿದರು. ರಾಜಸ್ಥಾನವು 16.2 ಓವರ್ಗಳಲ್ಲಿ ಗುರಿ ತಲುಪಿತು. ಅಭಿಜಿತ್ ಥೋಮರ್ ಔಟಾಗದೆ 66 ರನ್ ಗಳಿಸಿದರು.