ಹೊಸದಿಲ್ಲಿ: ಮುಂಬರುವ ದಿಲ್ಲಿ ವಿಧಾನಸಭಾ ಚುನಾವಣೆಗೆ ಎಎಪಿ ಪಕ್ಷವು ಗುರುವಾರ ತನ್ನ 11 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ.
2025ರ ಆರಂಭದಲ್ಲಿ ದಿಲ್ಲಿ ವಿಧಾನಸಭೆಗೆ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಿಂದ ಇತ್ತೀಚೆಗೆ ಎಎಪಿಗೆ ಸೇರ್ಪಡೆಗೊಂಡ ಆರು ನಾಯಕರು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಬಿಜೆಪಿಯ ಮಾಜಿ ನಾಯಕರಾದ ಬ್ರಹ್ಮ್ ಸಿಂಗ್ ತನ್ವರ್, ಅನಿಲ್ ಝಾ ಮತ್ತು ಬಿಬಿ ತ್ಯಾಗಿ, ಮಾಜಿ ಕಾಂಗ್ರೆಸ್ ನಾಯಕರಾದ ಚೌಧರಿ ಜುಬೇರ್ ಅಹ್ಮದ್, ವೀರ್ ದಿಂಗನ್ ಮತ್ತು ಸುಮೇಶ್ ಶೋಕೀನ್ ಸೇರಿದಂತೆ 11 ಅಭ್ಯರ್ಥಿಗಳಿಗೆ ಎಎಪಿ ಟಿಕೆಟ್ ನೀಡಲಾಗಿದೆ.
ಛತ್ತರ್ಪುರದಿಂದ ಮಾಜಿ ಬಿಜೆಪಿ ಶಾಸಕ ಬ್ರಹ್ಮ್ ಸಿಂಗ್ ತನ್ವಾರ್, ಕಿರಾರಿಯಿಂದ ಬಿಜೆಪಿ ಮಾಜಿ ಶಾಸಕ ಅನಿಲ್ ಝಾ, ಲಕ್ಷ್ಮಿ ನಗರದಿಂದ ಮಾಜಿ ಬಿಜೆಪಿ ಕೌನ್ಸಿಲರ್ ಬಿಬಿ ತ್ಯಾಗಿ, ಸೀಮಾಪುರಿಯಿಂದ ಮಾಜಿ ಕಾಂಗ್ರೆಸ್ ಶಾಸಕ ವೀರ್ ಸಿಂಗ್ ದಿಂಗನ್, ಮಟಿಯಾಲದಿಂದ ಮಾಜಿ ಕಾಂಗ್ರೆಸ್ ಶಾಸಕ ಸುಮೇಶ್ ಶೋಕೀನ್, ರೋಹ್ತಾಸ್ ನಗರದಿಂದ ಮಾಜಿ ಎಎಪಿ ಶಾಸಕಿ ಸರಿತಾ ಸಿಂಗ್ , ಬದರ್ಪುರದಿಂದ ಎಎಪಿ ಮಾಜಿ ಶಾಸಕ ರಾಮ್ ಸಿಂಗ್ ನೇತಾಜಿ, ವಿಶ್ವಾಸ್ ನಗರದಿಂದ ದೀಪಕ್ ಸಿಂಘ್ಲಾ, ಸೀಲಂಪುರದಿಂದ ಜುಬೇರ್ ಚೌಧರಿ, ಗೋಂಡಾದಿಂದ ಗೌರವ್ ಶರ್ಮಾ, ಕರವಾಲ್ ನಗರದಿಂದ ಮನೋಜ್ ತ್ಯಾಗಿ ಅವರಿಗೆ ಟಿಕೆಟ್ ಘೋಷಿಸಲಾಗಿದೆ.