ಟೆಹ್ರಾನ್: ಇರಾನ್ ನ ಪರಮೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಕೋಮಾದಲ್ಲಿದ್ದಾರೆ ಎಂಬ ಮಾಧ್ಯಮ ವರದಿಗಳ ಮಧ್ಯೆ ಖಾಮಿನೈ ಅವರನ್ನು ಲೆಬನಾನ್ ನಲ್ಲಿನ ಇರಾನ್ ರಾಯಭಾರಿ ಭೇಟಿ ಮಾಡಿದ ಫೋಟೋವನ್ನು ಅವರ ಕಚೇರಿಯು ಪೋಸ್ಟ್ ಮಾಡಿದೆ.
ಆಯತುಲ್ಲಾ ಅಲಿ ಖಾಮಿನೈ(85) ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರು ಕೋಮಾದಲ್ಲಿದ್ದಾರೆ ಮತ್ತು ಅವರು ತನ್ನ 55 ವರ್ಷದ ಮಗ ಮೊಜ್ತಾಬಾ ಖಾಮಿನೈ ಅವರನ್ನು ರಹಸ್ಯ ಸಭೆಯಲ್ಲಿ ತಮ್ಮ ಉತ್ತರಾಧಿಕಾರಿಯಾಗಿ ನಾಮನಿರ್ದೇಶನ ಮಾಡಿದ್ದಾರೆ ಮಾಧ್ಯಮಗಳು ವರದಿ ಮಾಡಿದ್ದವು.
ಆಯತುಲ್ಲಾ ಅಲಿ ಖಾಮಿನೈ ಅವರು ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಅಕ್ಟೋಬರ್ ನಲ್ಲಿ ನ್ಯೂಯಾರ್ಕ್ ಟೈಮ್ಸ್ ಕೂಡ ವರದಿ ಮಾಡಿದ್ದವು. ಖಾಮಿನೈ ಅವರ ಕಚೇರಿ ರವಿವಾರ ಎಕ್ಸ್ ಖಾತೆ @Khamenei_fa ದಲ್ಲಿ ಮಾಡಿರುವ ಪೋಸ್ಟ್ ನಲ್ಲಿ ಅವರು ತಮ್ಮ ಕಚೇರಿಯಲ್ಲಿ ಲೆಬನಾನ್ ನಲ್ಲಿರುವ ಇರಾನ್ ನ ರಾಯಭಾರಿ ಮೊಜ್ತಾಬಾ ಅಮಾನಿ ಅವರೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ.
ಆಯತುಲ್ಲಾ ಅಲಿ ಖಾಮಿನೈ ಅವರು ಲೆಬನಾನ್ ನಲ್ಲಿರುವ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ನ ಹಿರಿಯ ರಾಯಭಾರಿ ಮೊಜ್ತಾಬಾ ಅಮಾನಿ ಅವರನ್ನು ಇಂದು ಮಧ್ಯಾಹ್ನ ತಮ್ಮ ದೈನಂದಿನ ಸಭೆಗಳ ಮಧ್ಯೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು @Khamenei_fa ಎಕ್ಸ್ ಖಾತೆಯಲ್ಲಿ ಪರ್ಷಿಯನ್ ಭಾಷೆಯಲ್ಲಿ ಬರೆಯಲಾಗಿದೆ.
ظهر امروز یکشنبه ۲۷ آبان ۱۴۰۳؛ دیدار و گفتوگو با آقای مجتبی امانی، سفیر جانباز جمهوری اسلامی ایران در لبنان pic.twitter.com/ctIRbi9bVA
— KHAMENEI.IR | فارسی (@Khamenei_fa) November 17, 2024