EBM News Kannada
Leading News Portal in Kannada

ಗುಜರಾತ್ ನಲ್ಲಿ ಬುಲೆಟ್ ರೈಲು ಸೇತುವೆ ಕುಸಿತ | ಮೂವರು ಕಾರ್ಮಿಕರು ಮೃತ್ಯು, ಓರ್ವನಿಗೆ ಗಾಯ

0


ಗಾಂಧಿನಗರ : ಗುಜರಾತ್ನ ಆನಂದ್ ಜಿಲ್ಲೆಯ ವಸಾದ್ ಸಮೀಪದ ರಾಜಪುರ ಗ್ರಾಮದಲ್ಲಿ ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು ಕಾರಿಡಾರ್ ಯೋಜನೆಯ ನಿವೇಶನದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಮಂಗಳವಾರ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ ಹಾಗೂ ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಆರಂಭದಲ್ಲಿ ಪೊಲೀಸರು ನಿರ್ಮಾಣ ಹಂತದಲ್ಲಿರುವ ಸೇತುವೆ ಕುಸಿಯಿತು ಎಂದು ವರದಿ ಮಾಡಿದ್ದರು. ಆದರೆ, ಅನಂತರ ಬುಲೆಟ್ ರೈಲು ಯೋಜನೆಯ ಮೇಲ್ವಿಚಾರಣೆ ನಡೆಸುತ್ತಿರುವ ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೋರೇಶನ್ ಲಿಮಿಟೆಡ್ (ಎನ್ಎಚ್ಎಸ್ಆರ್ಸಿಎಲ್) ವಡೋದರಾದ ಮಾಹಿ ನದಿ ಸಮೀಪ ನಿರ್ಮಿಸಲಾಗಿದ್ದ ತಾತ್ಕಾಲಿಕ ಸ್ಟೀಲ್ ಹಾಗೂ ಕಾಂಕ್ರೀಟ್ ಸೇತುವೆ ಕುಸಿಯಿತು ಎಂದು ಸ್ಪಷ್ಟನೆ ನೀಡಿದೆ.

ದುರ್ಘಟನೆಯಲ್ಲಿ ಮೂವರು ಕಾರ್ಮಿಕರು ಮೃತಪಟ್ಟಿರುವುದನ್ನು ಆನಂದ್ನ ಪೊಲೀಸ್ ಅಧೀಕ್ಷಕ ಗೌರವ್ ಜಸಾನಿ ದೃಢಪಡಿಸಿದ್ದಾರೆ. ‘‘ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಗಾಯಗೊಂಡ ಇನ್ನೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ’’ ಎಂದು ಅವರು ಹೇಳಿದ್ದಾರೆ.

‘‘ನಾಲ್ವರು ಕಾರ್ಮಿಕರು ಕಾಂಕ್ರೀಟ್ ಬ್ಲಾಕ್ನ ಅಡಿಯಲ್ಲಿ ಸಿಲುಕಿಕೊಂಡರು. ಇಬ್ಬರು ಸ್ಥಳದಲ್ಲೇ ಮೃತಪಟ್ಟರು. ಇನ್ನೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಸಂದರ್ಭ ಸಾವನ್ನಪ್ಪಿದರು’’ ಎಂದು ಆನಂದ್ನ ಅಗ್ನಿಶಾಮಕದ ದಳದ ಅಧಿಕಾರಿ ಧರ್ಮೇಶ್ ಗೋರ್ ತಿಳಿಸಿದ್ದಾರೆ.

ಸ್ಥಳೀಯ ಸ್ವಯಂಸೇವಕರ ನೆರವಿನಿಂದ ರಕ್ಷಣಾ ತಂಡ ಕ್ರೇನ್ ಹಾಗೂ ಬುಲ್ಡೋಝರ್ಗಳನ್ನು ಬಳಸಿಕೊಂಡು ಅವಶೇಶಗಳನ್ನು ತೆರವುಗೊಳಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

Leave A Reply

Your email address will not be published.