EBM News Kannada
Leading News Portal in Kannada

ಕ್ರೀಡಾ ಕ್ಷೇತ್ರದಲ್ಲಿ ಜೀವಮಾನದ ಸಾಧನೆ |‘ ಧ್ಯಾನ್‌ಚಂದ್‌‘ ಬದಲಿಗೆ ‘ಅರ್ಜುನ್’ ಪುರಸ್ಕಾರ | Lifetime Achievement in Sports

0


ಹೊಸದಿಲ್ಲಿ : ಕ್ರೀಡಾ ಕ್ಷೇತ್ರದಲ್ಲಿನ ಜೀವಮಾನದ ಸಾಧನೆಗಾಗಿ ನೀಡಲಾಗುವ ಧ್ಯಾನ್‌ಚಂದ್ ಪುರಸ್ಕಾರವನ್ನು ಈ ವರ್ಷದಿಂದ ಸ್ಥಗಿತಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಅದರ ಬದಲಿಗೆ ಅರ್ಜುನ ಜೀವಮಾನದ ಪ್ರಶಸ್ತಿಯನ್ನು ಆರಂಭಿಸಲಾಗುವುದೆಂದು ಕೇಂದ್ರ ಕ್ರೀಡಾ ಸಚಿವಾಲಯ ಗುರುವಾರ ಪ್ರಕಟಿಸಿದೆ. ದೇಶದ ವಿವಿಧ ಕ್ರೀಡಾಪುರಸ್ಕಾರ ಗಳಲ್ಲಿ ಸುಧಾರಣೆತರುವ ಪ್ರಯತ್ನವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆಯೆಂದು ಅದು ಹೇಳಿದೆ.

ಭಾರತದ ಹಾಕಿ ಕ್ರೀಡೆಯ ದಂತಕತೆಯೆನಿಸಿದ ಮೇಜರ್ ಧ್ಯಾನ್‌ಚಂದ್ ಹೆಸರಿನಲ್ಲಿ 2002ರಲ್ಲಿ ಧ್ಯಾನ್‌ಚಂದ್ ಜೀವಮಾನದ ಪ್ರಶಸ್ತಿಯನ್ನು ಆರಂಭಿಸಲಾಗಿತ್ತು. ಒಲಿಂಪಿಕ್‌ಗೇಮ್ಸ್, ಪ್ಯಾರಾಲಿಂಪಿಕ್ ಗೇಮ್ಸ್, ಏಶ್ಯನ್ ಗೇಮ್ಸ್ ಹಾಗೂ ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಮಾನ್ಯತೆ ಪಡೆದ ಕ್ರೀಡೆಗಳಲ್ಲಿ ಸಾಧನೆಗೈದ ಕ್ರೀಡಾಪಟುಗಳಿಗೆ ಈ ಪ್ರಶಸ್ತಿ ಯನ್ನು ನೀಡಲಾಗುತ್ತದೆ.

2023ರಲ್ಲಿ ಈ ಪ್ರಶಸ್ತಿಯನ್ನು ಮಾಜಿ ಶಟ್ಲರ್ ಮಂಜುಷಾ ಕನ್ವರ್, ಮಾಜಿ ಹಾಕಿಪಟು ವಿನೀತ್‌ಕುಮಾರ್ ಹಾಗೂ ಕಬಡ್ಡಿ ಆಟಗಾರ ಕವಿತಾ ಸೆಲ್ವರಾಜ್ ಅವರಿಗೆ ನೀಡಲಾಗಿತ್ತು.

‘‘ವಿವಿಧ ಕ್ರೀಡಾಪುರಸ್ಕಾರಗಳಲ್ಲಿ ಸುಧಾರಣೆಗಳನ್ನು ತರಲಾಗುತ್ತಿದೆ. ತಳಹಂತ ಕೋಚ್‌ಗಳ ಪ್ರಯತ್ನಗಳನ್ನು ಮಾನ್ಯತೆ ನೀಡುವುದಕ್ಕಾಗಿ ಅವರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಅರ್ಹಗೊಳಿಸಲಾಗಿದೆ’’ ಎಂದು ಸಚಿವಾಲಯವು ಹೇಳಿಕೆಯಲ್ಲ ತಿಳಿಸಿದೆ.

ಅರ್ಜುನ ಜೀವಮಾನ ಸಾಧನೆ ಪ್ರಶಸ್ತಿಯನ್ನು ಆರಂಭಿಸಲಾಗುತ್ತಿದ್ದು, ಅದನ್ನು ಕ್ರೀಡಾ ಕ್ಷೇತ್ರದ ಅಭಿವೃದ್ಧಿಗಾಗಿ ಜೀವಮಾನದ ಕೊಡುಗೆ ನೀಡಿದವರಿಗೆ ನೀಡಲಾಗುವುದು ಎಂದು ಹೇಳಿಕೆಯು ತಿಳಿಸಿದೆ.

ಖೇಲೋ ಇಂಡಿಯಾ ವಿವಿ ಕ್ರೀಡಾಕೂಟದಲ್ಲಿ ಅತ್ಯತ್ಕೃಷ್ಟ ಸಾಧನೆ ಮಾಡಿದ ವಿಶ್ವವಿದ್ಯಾನಿಲಯಕ್ಕೆ ಮೌಲಾನಾ ಅಬ್ದುಲ್ ಕಲಾಂ (ಎಂಎಕೆಎ) ಟ್ರೋಫಿಯನ್ನು ನೀಡಲಾಗುವುದು ಎಂದು ಕ್ರೀಡಾ ಸಚಿವಾಲಯ ಘೋಷಿಸಿದೆ. ಕ್ರೀಡಾ ಅಭಿವೃದ್ಧಿಗಾಗಿ ಜೀವಮಾನದ ಕೊಡುಗೆ ನೀಡಿದವಿರಗೆ ಅರ್ಜುನ ಪುರಸ್ಕಾರವನ್ನು ಆರಂಭಿಸಲಾಗಿದೆಯೆಂದು ಕ್ರೀಡಾ ಸಚಿವಾಲಯ ತಿಳಿಸಿದೆ.

Leave A Reply

Your email address will not be published.