ಲೆಬನಾನ್: ಹಿಝ್ಬುಲ್ಲಾ ಹೋರಾಟಗಾರರ ನೆಲೆಯನ್ನು ಗುರಿ ಮಾಡಿ ಕಳೆದ 24 ಗಂಟೆಗಳಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 37 ಮಂದಿ ಮೃತಪಟ್ಟಿದ್ದು, 151 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ಪ್ರಕಟಿಸಿದೆ.
ಬೈರೂತ್ ನಗರದ ದಕ್ಷಿಣ ಉಪನಗರಗಳನ್ನು ಮತ್ತು ಬೈರೂತ್ ವಿಮಾನ ನಿಲ್ದಾಣವನ್ನು ಗುರಿ ಮಾಡಿ ಶುಕ್ರವಾರ ಮುಂಜಾನೆ ಇಸ್ರೇಲ್ ದಾಳಿ ನಡೆಸುತ್ತಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ.
ಗುರುವಾರ ಇಸ್ರೇಲ್, ಲೆಬನಾನ್ ರಾಜಧಾನಿ ಬೈರೂತ್ ನಲ್ಲಿರುವ ಹಿಝ್ಬುಲ್ಲಾ ಹೋರಾಟಗಾರರ ಕೇಂದ್ರ ಕಚೇರಿಯ ಮೇಲೆ ದಾಳಿ ನಡೆಸಿದ್ದು, ಯುದ್ಧವಿಮಾನಗಳು ದೇಶದ ಪ್ರಮುಖ ನಗರಗಳ ಮೇಲೆ ಗುಂಡಿನ ಮಳೆಗೆರೆಯುತ್ತಿವೆ.
ಈ ವಾರದ ಆರಂಭದಲ್ಲಿ ಹತ್ಯೆಗೀಡಾದ ಹಸನ್ ನಸ್ರುಲ್ಲಾ ಅವರ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗುತ್ತಿರುವ ಹಾಶಿಮ್ ಹತ್ಯೆಗೆ ಪಣ ತೊಟ್ಟಿರುವ ಇಸ್ರೇಲ್ ಈ ದಾಳಿ ನಡೆಸುತ್ತಿದೆ.