EBM News Kannada
Leading News Portal in Kannada

ಕಸ್ರ್ಕ್ ವಲಯದಲ್ಲಿ ಮಾನವೀಯ ಪ್ರಯತ್ನಗಳಿಗೆ ಕೈಜೋಡಿಸಲು ವಿಶ್ವಸಂಸ್ಥೆಗೆ ಉಕ್ರೇನ್ ಆಹ್ವಾನ

0


ಕೀವ್ : ರಶ್ಯದ ಕಸ್ರ್ಕ್ ವಲಯದಲ್ಲಿ ನಡೆಸುತ್ತಿರುವ ಮಾನವೀಯ ಪ್ರಯತ್ನಗಳಿಗೆ ಕೈಜೋಡಿಸುವಂತೆ ಉಕ್ರೇನ್ ಸೋಮವಾರ ವಿಶ್ವಸಂಸ್ಥೆ ಮತ್ತು ಅಂತರಾಷ್ಟ್ರೀಯ ರೆಡ್ಕ್ರಾಸಸ್ ಸಮಿತಿ(ಐಸಿಆರ್ಸಿೆ)ಗೆ ಆಹ್ವಾನ ನೀಡಿದೆ.

ಕಸ್ರ್ಕ್ ವಲಯಕ್ಕೆ ನುಗ್ಗಿದ್ದ ಉಕ್ರೇನ್ ಪಡೆ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಅಲ್ಲಿದೆ. ಕಸ್ರ್ಕ್ ವಲಯದ ಸುಮಾರು 100 ವಸಾಹತುಗಳು ಉಕ್ರೇನ್ ಸೇನೆಯ ನಿಯಂತ್ರಣದಲ್ಲಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ್ ಹೇಳಿದ್ದಾರೆ.

ಕಸ್ರ್ಕ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಲು ವಿಶ್ವಸಂಸ್ಥೆ ಮತ್ತು ಐಸಿಆರ್ಸಿೆಗೆ ಔಪಚಾರಿಕ ಆಹ್ವಾನ ನೀಡುವಂತೆ ತನ್ನ ಸಚಿವಾಲಯಕ್ಕೆ ಸೂಚಿಸಿರುವುದಾಗಿ ರವಿವಾರ ಈಶಾನ್ಯ ಉಕ್ರೇನ್ ಪ್ರದೇಶಕ್ಕೆ ಭೇಟಿ ನೀಡಿದ್ದ ವಿದೇಶಾಂಗ ಸಚಿವ ಆಂಡ್ರಿಯ್ ಸಿಬಿಹಾ ಹೇಳಿದ್ದಾರೆ. ಆಹ್ವಾನ ನೀಡಿರುವುದನ್ನು ಸಚಿವಾಲಯ ದೃಢಪಡಿಸಿದೆ.

ವಿಶ್ವಸಂಸ್ಥೆ ಮತ್ತು ಐಸಿಆರ್ನಿ ಕೆಲಸವನ್ನು ಸುಗಮಗೊಳಿಸಲು ಮತ್ತು ಅಂತರಾಷ್ಟ್ರೀಯ ಮಾನವೀಯ ಕಾನೂನಿಗೆ ತನ್ನ ನಿಷ್ಟೆಯನ್ನು ಸಾಬೀತುಪಡಿಸಲು ಉಕ್ರೇನ್ ಸಿದ್ಧವಿದೆ. ಕಸ್ರ್ಕ್ ಪ್ರದೇಶದಲ್ಲಿ ನಾಗರಿಕರಿಗೆ ಸುರಕ್ಷಿತ ಮಾರ್ಗ ಮತ್ತು ಮಾನವೀಯ ನೆರವನ್ನು ಉಕ್ರೇನ್ ಸೇನೆಯು ಖಾತರಿಪಡಿಸುತ್ತಿದೆ ಎಂದು ಸಿಬಿಹಾ `ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಸ್ರ್ಕ್ ಪ್ರಾಂತದ ಭೂಪ್ರದೇಶದಲ್ಲಿ ಮಾನವೀಯ ಪರಿಸ್ಥಿತಿ ಮತ್ತು ಮೂಲಭೂತ ಮಾನವ ಹಕ್ಕುಗಳನ್ನು ಸರಿಯಾಗಿ ಖಾತರಿ ಪಡಿಸುವ ಅಗತ್ಯವನ್ನು ಮನಗಂಡು ಐಸಿಆರ್ಸಿಿ ಮತ್ತು ವಿಶ್ವಸಂಸ್ಥೆಗೆ ಆಹ್ವಾನ ನೀಡಲಾಗಿದೆ. ಜಿನೆವಾ ನಿರ್ಣಯಕ್ಕೆ ಅನುಸಾರವಾಗಿ ಅಂತರಾಷ್ಟ್ರೀಯ ಮಾನವೀಯ ಕಾನೂನಿನ ತತ್ವಗಳನ್ನು ಉಕ್ರೇನ್ ಅನುಸರಿಸುತ್ತಿದೆಯೇ ಎಂಬುದನ್ನು ಮೇಲ್ವಿಚಾರಣೆ ಮಾಡುವಂತೆ ಐಸಿಆರ್ಸಿಯಯನ್ನು ಕೋರಲಾಗಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.

ಈ ಮಧ್ಯೆ, ಐಸಿಆರ್ಸಿಿ ಅಧ್ಯಕ್ಷ ಮಿರ್ಜಾನಾ ಸ್ಪೊಲ್ಜಾರಿಕ್ ಮಾಸ್ಕೋಗೆ ಆಗಮಿಸಿ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ರಣನ್ನು ಭೇಟಿಯಾಗುವ ಕಾರ್ಯಕ್ರಮವಿದೆ ಎಂದು ರಶ್ಯ ಸರಕಾರಿ ಸ್ವಾಮ್ಯದ ಆರ್ಐಿಎ ಸುದ್ದಿಸಂಸ್ಥೆ ಸೋಮವಾರ ವರದಿ ಮಾಡಿದೆ. ಕಳೆದ ವಾರ ಉಕ್ರೇನ್ನು ಡೊನೆಟ್ಸ್ಕ್ ಪ್ರಾಂತದ ಗ್ರಾಮವೊಂದರ ಮೇಲೆ ರಶ್ಯ ನಡೆಸಿದ ಶೆಲ್ ದಾಳಿಯಲ್ಲಿ ಐಸಿಆರ್ಸಿೇ ಪರ ಕಾರ್ಯ ನಿರ್ವಹಿಸುವ ಮೂವರು ಉಕ್ರೇನ್ ಪ್ರಜೆಗಳು ಮೃತಪಟ್ಟಿದ್ದು ಇತರ ಇಬ್ಬರು ಗಾಯಗೊಂಡಿದ್ದರು. ದಾಳಿಯನ್ನು ಸ್ಪೊಲ್ಜಾರಿಕ್ ಖಂಡಿಸಿದ್ದರು.

Leave A Reply

Your email address will not be published.