EBM News Kannada
Leading News Portal in Kannada

WPL | ಆರ್‌ಸಿಬಿ ಗೆಲುವಿಗೆ 195 ರನ್ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ | WPL

0



ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ಆರ್‌ಸಿಬಿ ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ 195 ರನ್ ಗಳ ಕಠಿಣ ಸವಾಲನ್ನು ನೀಡಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಆರಂಭಿಕ ಬ್ಯಾಟರ್ ಆಗಿ ಕ್ರೀಸ್‌ ಗೆ ಇಳಿದ ನಾಯಕಿ ಮೆಗ್ ಲ್ಯಾನಿಂಗ್ 2 ಬೌಂಡರಿ ಸಹಿತ 11 ರನ್ ಗಳಿಸಿ ಸೋಫಿ ಡಿವೈನ್ ಎಸೆತದಲ್ಲಿ ಜೋರ್ಜಿಯಾಗೆ ಕ್ಯಾಚಿತ್ತು ಔಟ್‌ ಆದರೆ, ಸ್ಪೋಟಕ ಬ್ಯಾಟರ್ ಶಫಾಲಿ ವರ್ಮ 3 ಬೌಂಡರಿ 4 ಸಿಕ್ಸರ್ ಸಹಿತ 50 ರನ್ ಕಲೆಹಾಕಿ ಅರ್ಧ ಶತಕ ದಾಖಲಿಸಿ, ಅಲೈಸ್ ಕ್ಯಾಪ್ಸೆಯವರೊಂದಿಗೆ ಭರ್ಜರಿ 91 ರನ್ ಗಳ ಜೊತೆಯಾಟ ಪ್ರದರ್ಶಿಸಿದರು.

ಅಲೈಸ್ ಕ್ಯಾಪ್ಸೆ 2 ಸಿಕ್ಸರ್ 4 ಬೌಂಡರಿ ಬಾರಿಸಿ 46 ರನ್ ಗಳಿಸಿ ನಾಡಿನ್ ಡಿ ಕ್ಲರ್ಕ್ ಅವರ ಎಸೆತಕ್ಕೆ ಬೌಲ್ಡ್ ಆಗಿ, 4 ರನ್ ಗಳ ಅಂತರದಲ್ಲಿ ಅರ್ಧ ಶತಕ ವಂಚಿತರಾದರು. ಮರಿಝನ್ನೆ ಕಪ್ 32 ರನ್, ಜೆಸ್ಸ್ ಜೊನಸ್ಸೆನ್ 36 ರನ್ ಹಾಗೂ ಅರುಂಧತಿ ರೆಡ್ಡಿ 10 ರನ್ ಗಳಿಸಿದರು.

ಆರ್‌ಸಿಬಿ ಪರ ಸೋಫಿ ಡಿವೈನ್ ,ನಾಡಿನ್ ಡಿ ಕ್ಲರ್ಕ್ ತಲಾ 2 ವಿಕೆಟ್ ತಮ್ಮದಾಗಿಸಿಕೊಂಡರೆ, ಶ್ರೇಯಾಂಕ ಪಾಟಿಲ್ 1 ವಿಕೆಟ್ ಪಡೆದು ಮಿಂಚಿದರು.

Leave A Reply

Your email address will not be published.