ಹೊಸದಿಲ್ಲಿ: ನಟಿ ತೃಷಾ ಕೃಷ್ಣನ್ ಅವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿ ನಟ ಮನ್ಸೂರ್ ಅಲಿ ಖಾನ್ ವಿರುದ್ಧ ಪ್ರಕರಣ ದಾಖಲಿಸುವಂತೆ ತಮಿಳುನಾಡು ಪೊಲೀಸರಿಗೆ ರಾಷ್ಟ್ರೀಯ ಮಹಿಳಾ ಆಯೋಗ (NCW) ಸೋಮವಾರ ನಿರ್ದೇಶಿಸಿದೆ.
ಸಾಮಾಜಿಕ ಮಾಧ್ಯಮ ‘ಎಕ್ಸ್’ನ ಪೋಸ್ಟ್‌ನಲ್ಲಿ ಎನ್‌ಸಿಡಬ್ಲ್ಯು, ‘‘ನಟಿ ತೃಷಾ ಕೃಷ್ಣನ್ ಕುರಿತು ನಟ ಮನ್ಸೂರ್ ಆಲಿ ಖಾನ್ ನೀಡಿದ ಆಕ್ಷೇಪಾರ್ಹ ಹೇಳಿಕೆ ತೀವ್ರ ಕಳವಳಕಾರಿ. ನಾವು ಈ ಘಟನೆಯನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿ ಕಾನೂನಿನ ಸಂಬಂಧಿತ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸುವಂತೆ ಡಿಜಿಪಿ ಅವರಿಗೆ ನಿರ್ದೇಶಿಸಿದ್ದೇವೆ. ಇಂತಹ ಹೇಳಿಕೆಗಳು ಮಹಿಳೆಯ ಮೇಲಿನ ಹಿಂಸಾಚಾರವನ್ನು ಸಹಜಗೊಳಿಸುತ್ತದೆ. ಇದನ್ನು ಖಂಡಿಸಬೇಕು’’ ಎಂದಿದೆ.