ಎಐ ಅಥವಾ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಉದ್ಯಮದಲ್ಲಿ ಹೊಸ ಕ್ರಾಂತಿ ಉಂಟುಮಾಡಿದೆ. ಮೈಕ್ರೋಸಾಫ್ಟ್ ಮತ್ತು ಗೂಗಲ್‍ನಂಥ ಸಂಸ್ಥೆಗಳು ತಮ್ಮ ಪ್ಲಾಟ್‍ಫಾರಂಗಳನ್ನು ವಿಸ್ತೃತಗೊಳಿಸಲು ಹಲವು ಎಐ ಮಾಡೆಲ್‍ಗಳು ಮತ್ತು ವಿಶೇಷತೆಗಳನ್ನು ಪರಿಚಯಿಸಿವೆ. ಮಾರ್ಕ್ ಝುಕರ್ ಬರ್ಗ್ ಅವರ ಮೆಟಾ ಕೂಡಾ ಈ ವಿಚಾರದಲ್ಲಿ ಹಿಂದಿಲ್ಲ. ಮೆಷಿನ್ ಲರ್ನಿಂಗ್ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿಕೊಂಡು ಹಲವು ಯೋಜನೆಗಳನ್ನು ಇದು ಕೂಡಾ ಹಮ್ಮಿಕೊಂಡಿದೆ. ಸದ್ಯದಲ್ಲೇ ಹೊಸ ಎಐ ವಿಶೇಷತೆಯನ್ನು ವಾಟ್ಸ್ ಆ್ಯಪ್ ನಲ್ಲಿ ಪರಿಚಯಿಸಲು ಮೆಟಾ ಸಜ್ಜಾಗಿದೆ.
ವಾಟ್ಸ್ ಆ್ಯಪ್ ಬಳಕೆದಾರರು ಬರಹ ಅಧರಿತ ಕಮಾಂಡ್ ಬಳಸಿ ವಿಶೇಷ ಸ್ಟಿಕ್ಕರ್‍ಗಳನ್ನು ಸೃಷ್ಟಿಕೊಳ್ಳಲು ಅನುವು ಮಾಡಿಕೊಡುವ ಹೊಸ ಎಐ ವಿಶೇಷತೆಯನ್ನು ಪರೀಕೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಓಪನ್‍ಎಐನ ಡಾಲ್-ಇ ಅಥವಾ ಮಿಡ್‍ಜರ್ನಿಯಂಥ ವಿಶೇಷತೆಗಳ ಮಾದರಿಯಲ್ಲಿ ಈ ವಿಶೇಷತೆ ಕೂಡಾ ಇರುತ್ತದೆ ಎನ್ನಲಾಗಿದೆ. ವೆಬ್‍ಟೈನ್‍ಫೋ ವರದಿಯ ಪ್ರಕಾರ, ವಾಟ್ಸ್ ಆ್ಯಪ್ ಪ್ರಸ್ತುತ ಕೆಲ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಪ್ರಸ್ತುತ ವರ್ಷನ್ 2.23.17.14 ಮೂಲಕ ಹೊಸ ಎಐ ವಿಶೇಷತೆಯನ್ನು ಪರಿಚಯಿಸುತ್ತಿದೆ.
ಸದ್ಯಕ್ಕೆ ಈ ವಿಶೇಷತೆ ಪ್ರಯೋಗ ಹಂತದಲ್ಲಿದ್ದು, ಇದನ್ನು ಎಲ್ಲರಿಗೂ ಪರಿಚಯಿಸಿದ ಬಳಿಕ ಬಳಕೆದಾರರು ತಮ್ಮ ಸ್ಟಿಕ್ಕರ್ ಪ್ಯಾನೆಲ್‍ನಲ್ಲಿ ಸಂವಾದ ಗವಾಕ್ಷಿಯ ಮೂಲಕ ಹೊಸ ಆಯ್ಕೆಯನ್ನು ಕಂಡುಕೊಳ್ಳಬಹುದಾಗಿದೆ. ಜತೆಗೆ ಈ ಸ್ಟಿಕ್ಕರ್‍ಗಳನ್ನು ಸೃಷ್ಟಿಸಲು ಒಂದು ಬಟನ್ ಕೂಡಾ ಲಭ್ಯವಾಗಲಿದೆ.
ವೆಬ್‍ಸೈಟ್‍ನ ಸ್ಕ್ರೀನ್‍ಶಾಟ್, ಈ ಎಐ ವಿಶೇಷತೆ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ವಿವರಿಸುತ್ತದೆ. ಇದನ್ನು ಬಳಸಲು ಬಳಕೆದಾರರು ಎಐ-ಜನರೇಟೆಡ್ ಸ್ಟಿಕ್ಕರ್ ಎಂಬ ಬಟನ್ ಟ್ಯಾಪ್ ಮಾಡಬೇಕಾಗುತ್ತದೆ. ಆಗ ಅವರಿಗೆ “ಕ್ಯಾಟ್ ವೇರಿಂಗ್ ಎ ಹ್ಯಾಟ್” ಅಥವಾ ಡಾಗ್ ಪ್ಲೇಯಿಂಗ್ ಫೆಚ್ ಹೀಗೆ ಸುಳಿವುಗಳು ಸಿಗುತ್ತವೆ. ಬಳಿಕ ವಾಟ್ಸಪ್ ಈ ಸ್ಟಿಕ್ಕರ್ ಸರಣಿಗಳನ್ನು ಸೃಷ್ಟಿಸುತ್ತದೆ. ಇದನ್ನು ಬಳಕೆದಾರರು ಇಷ್ಟಪಟ್ಟಲ್ಲಿ ತಮ್ಮ ಸಂವಾದದಲ್ಲಿ ಬೇರೆಯವರೊಂದಿಗೆ ಹಂಚಿಕೊಳ್ಳಬಹುದಾಗಿದೆ.