Bhagyalakshmi Serial: ಅಮ್ಮನ ಅಡ್ಮಿಷನ್ ಕ್ಯಾನ್ಸಲ್ ಆಗಿರುವುದಕ್ಕೆ ತನ್ವಿಗೆ ಖುಷಿ; ಮತ್ತೆ ಅಡುಗೆ ಮನೆಗೇ ಫಿಕ್ಸ್ ಆಗುತ್ತಾಳಾ ಭಾಗ್ಯ?
ಅಮ್ಮನ ಸ್ಕೂಲ್ ಅಡ್ಮಿಷನ್ ಕ್ಯಾನ್ಸಲ್ ಆಗಿದೆ ಎಂದು ತಿಳಿಯುತ್ತಲೇ ತನ್ವಿಗೆ ಖುಷಿಯೋ ಖುಷಿ. ರೋಗಿ ಬಯಸ್ಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ ಎನ್ನುವಂತೆ, ಅಮ್ಮ ನನ್ನ ಜೊತೆ ಸ್ಕೂಲ್ಗೆ ಯಾಕಾದರೂ ಬಂದಳೋ ಎಂದು ತನ್ವಿ ಬೇಸರ ಮಾಡಿಕೊಳ್ಳುತ್ತಿದ್ದಂತೆ ಅಮ್ಮನ ಅಡ್ಮಿಷನ್ ಕ್ಯಾನ್ಸಲ್ ಆಗಿರುವ ವಿಚಾರ ತಿಳಿದು ಸಂತೋಷ ವ್ಯಕ್ತಪಡಿಸುತ್ತಾಳೆ.