Viral Video: ಎಮಿಲಿಯಾನಾ ಹಾಡಿಗೆ ಸುನಿಧಿ ಚೌಹಾನ್ ಡ್ಯಾನ್ಸ್; ಕ್ಯಾ ಬಾತ್ ಹೈ ಎಂದ ನೆಟ್ಟಿಗರು – Kannada News | Bollywood playback singer Sunidhi Chauhan dance for Emiliana song video went viral
Emiliana : ಮಾದಕ ಕಂಠದಿಂದ ಸಂಗೀತಪ್ರೇಮಿಗಳ ಮನಸ್ಸನ್ನು ಸೂರೆಗೊಂಡ ಗಾಯಕಿ ಸುನಿಧಿ ಚೌಹಾನ್ ಇದೀಗ ನೈಜೀರಿಯನ್ ಗಾಯಕ ಸೀಕೇಯ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನೀವು ಇಷ್ಟೊಂದು ಲೀಲಾಜಾಲವಾಗಿ ನರ್ತಿಸುತ್ತಿರುವುದನ್ನು ನೋಡಿ ನಿಜಕ್ಕೂ ಅಚ್ಚರಿಗೊಂಡಿದ್ದೇವೆ ಎನ್ನುತ್ತಿದ್ದಾರೆ ನೆಟ್ಟಿಗರು.
ಗಾಯಕಿ ಸುನಿಧಿ ಚೌಹಾನ್ ಕೊರಿಯೋಗ್ರಾಫರ್ ಶೆರ್ಲಿನ್ ಫರ್ನಾಂಡಿಸ್ ಜೊತೆ ಹೆಜ್ಜೆ ಹಾಕಿದ ಕ್ಷಣಗಳು
Dance: ನೈಜೀರಿಯಾದ ಗಾಯಕ ಮತ್ತು ಗೀತರಚನೆಕಾರ ಸೀಕೇ (CKay)ಯ ‘ಎಮಿಲಿಯಾನಾ- Emiliana’ ಎಂಬ ಪ್ರಸಿದ್ಧ ಹಾಡಿಗೆ ಬಾಲಿವುಡ್ ಗಾಯಕಿ ಸುನಿಧಿ ಚೌಹಾನ್ ಹೆಜ್ಜೆ ಹಾಕಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಸುನಿಧಿ ತನ್ನ ಕೊರಿಯೋಗ್ರಾಫರ್ ಶೆರ್ಲಿನ್ ಫರ್ನಾಂಡಿಸ್ ಅವರೊಂದಿಗೆ ನರ್ತಿಸಿದ್ದಾರೆ. ಸ್ಪೋರ್ಟಿ ಡ್ರೆಸ್ ಮತ್ತು ಬನ್ ಕೇಶವಿನ್ಯಾಸದಲ್ಲಿ ಸುನಿಧಿ ಆಕರ್ಷಕವಾಗಿ ಕಾಣುತ್ತಿದ್ದಾರೆ. ‘ನಿಮಗಾಗಿ ಇಲ್ಲಿದೆ ಮಂಗಲ್ (ಮಂಗಳವಾರ) ಕಾ ದಂಗಲ್ ‘ ಎಂದು ಸುನಿಧಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.
2021ರ ಡಿ.3ರಂದು ದಕ್ಷಿಣ ಆಫ್ರಿಕಾದ ವಾರ್ನರ್ ಮ್ಯೂಸಿಕ್ ಈ ಹಾಡನ್ನು ಬಿಡುಗಡೆ ಮಾಡಿದೆ. ಹಾಡಿನ ಸಾಹಿತ್ಯದ ಮೊದಲ ಪ್ಯಾರಾ ಈ ಕೆಳಗಿನಂತಿದೆ.
All because of you, I be on the phone, all night long, oh
No be small thing wey you do to me, oh, no, no, no
I be on my business, shawty
But you be on my mind, shawty
Ebelebe oloma, my honey, aah-ah
ನಿನ್ನೆಯಷ್ಟೇ ಪೋಸ್ಟ್ ಮಾಡಿದ ಈ ವಿಡಿಯೋ ಅನ್ನು ಈತನಕ 5.5 ಲಕ್ಷ ಜನರು ನೋಡಿದ್ದಾರೆ. 62,000 ಜನರು ಲೈಕ್ ಮಾಡಿದ್ದಾರೆ. ಸುನಿಧಿಯ ಅಭಿಮಾನಿಗಳು ಪ್ರತಿಕ್ರಿಯೆಯ ಹೊಳೆಯನ್ನೇ ಹರಿಸಿದ್ದಾರೆ. ಬಹುಮುಖ ಪ್ರತಿಭೇ ಸುನಿಧಿ! ಮಾದಕ ಧ್ವನಿಯೊಂದಿಗೆ ಈಗ ಮಾದಕ ನೃತ್ಯವೂ ಆಹಾ! ಎಂದಿದ್ದಾರೆ ಅನೇಕರು. ಎಷ್ಟು ಲೀಲಾಜಾಲವಾಗಿ ನರ್ತಿಸುತ್ತಿದ್ದಾರೆ ಸುನಿಧಿ, ನಿಜಕ್ಕೂ ಬಹಳ ಛಂದ ಎಂದಿದ್ದಾರೆ ಒಬ್ಬರು.
ಕೆಲ ತಿಂಗಳುಗಳ ಹಿಂದೆ ಸುನಿಧಿ ತನ್ನ ಮಗನೊಂದಿಗೆ ಸ್ಯಾಮ್ ಸ್ಮಿತ್ನ Unholy ಹಾಡಿದಾಗ ನೆಟ್ಟಿಗರು ವಿರೋಧಿಸಿದ್ದರು. ಈ ಹಾಡಿನ ಸಾಹಿತ್ಯ ಮಗುವಿನೊಂದಿಗೆ ಹಾಡಲು ಸೂಕ್ತವಲ್ಲ. ಇದು ಸುನಿಧಿಗೆ ತಿಳಿದಿದೆಯೇ? ಎಂದಿದ್ದರು. ಇನ್ನೂ ಕೆಲವರು ಮಗು ಯಾವತ್ತೂ ಧ್ವನಿಯನ್ನು ಮಾತ್ರ ಅನುಕರಿಸುತ್ತದೆ, ಅದಕ್ಕೆ ಸಾಹಿತ್ಯದ ಹಂಗು ಬೇಡ. ಅಮ್ಮನ ಕಂಠವನ್ನು ಗಮನಿಸಿ, ಮುದ್ದಾದ ಮಗುವಿನ ಹಾವಭಾವವನ್ನು ಗಮನಿಸಿ ಎಂದು ಬೆಂಬಲ ವ್ಯಕ್ತಪಡಿಸಿದ್ದರು.
ಸುಮಾರು ನಾಲ್ಕು ಗಂಟೆಗಳ ಹಿಂದೆಯಷ್ಟೇ ಪೋಸ್ಟ್ ಮಾಡಿದ ಈ ವಿಡಿಯೋ ಆಸಕ್ತಿಕರವಾಗಿದೆ. ವಿಡಿಯೋ ಕ್ರಿಯೇಟರ್, ನಟ ಆದಿತ್ಯ ಠಾಕರೆ ಸುನಿಧಿಯೆಡೆ ಬಂದು ಸೆಲ್ಫಿ ತೆಗೆಸಿಕೊಳ್ಳಲು ಉಪಾಯ ಹೂಡುತ್ತಾರೆ. ಆಗ ಆಕೆ ಅವರ ಕೈಗೆ ಮೈಕ್ ಕೊಟ್ಟು ಹಾಡು ಎನ್ನುತ್ತಾರೆ. ಆತ ತಡಬಡಿಸಿ ಅಂತೂ ಧೈರ್ಯ ಮಾಡಿ ಹಾಡುತ್ತಾರೆ. ಸುನಿಧಿ ಸಮಾಧಾನದಿಂದ, ಅದು ಹಾಗಲ್ಲ ಹೀಗೆ ಎಂದು ಹಾಡಿ ತೋರಿಸುತ್ತಾಳೆ. ಮುಂದೇನಾಗುತ್ತದೆ ಎಂದು ಈ ಕೆಳಗಿನ ವಿಡಿಯೋದಲ್ಲಿ ನೀವೇ ನೋಡಿ.
ಸುನಿಧಿಗೆ ಸುನಿಧಿಯೇ ಸೈ. ಆಕೆಯ ಕಂಠದೊಳಗಿನ ಮಾರ್ದವತೆಯನ್ನು ಯಾರೂ ಅನುಕರಿಸಲು ಸಾಧ್ಯವಿಲ್ಲ. ಆದರೆ ಇದೀಗ ಎಮಿಲಿಯಾನಾ ಹಾಡಿಗೆ ನರ್ತಿಸಿ ತಾನೊಬ್ಬ ನೃತ್ಯಕಲಾವಿದೆ ಕೂಡ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದು ನೆಟ್ಟಿಗರು ಸುನಿಧಿಯ ನೃತ್ಯವನ್ನು ಎವೆಯಿಕ್ಕದೆ ನೋಡುತ್ತಿದ್ದಾರೆ.
ಈ ವಿಡಿಯೋಗಳನ್ನು ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On – 4:56 pm, Thu, 10 August 23