EBM News Kannada
Leading News Portal in Kannada

IND vs WI: 10 ಬೌಂಡರಿ, 4 ಸಿಕ್ಸರ್! ಕೆರಿಬಿಯನ್ನರ ವಿರುದ್ಧ ಅಬ್ಬರಿಸಿದ ಸೂರ್ಯ; ವಿಡಿಯೋ ನೋಡಿ – Kannada News | IND vs WI 3rd t20 match Suryakumar Yadav hits quick 83 runs in just 44 balls

0


Suryakumar Yadav: ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಸೂರ್ಯ, ಕೇವಲ 44 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 83 ರನ್​ಗಳ ಗೆಲುವಿನ ಇನ್ನಿಂಗ್ಸ್ ಆಡಿದರು.

IND vs WI: 10 ಬೌಂಡರಿ, 4 ಸಿಕ್ಸರ್! ಕೆರಿಬಿಯನ್ನರ ವಿರುದ್ಧ ಅಬ್ಬರಿಸಿದ ಸೂರ್ಯ; ವಿಡಿಯೋ ನೋಡಿ

ಸೂರ್ಯಕುಮಾರ್ ಯಾದವ್

ಕೆರಿಬಿಯನ್ನರ (India vs West Indies) ನಾಡಲ್ಲಿ ಕೊನೆಗೂ ಸೂರ್ಯಕುಮಾರ್ ಯಾದವ್ (Suryakumar Yadav) ಬ್ಯಾಟ್ ಅಬ್ಬರಿಸಿದೆ. ಟಿ20 ಸರಣಿಗೂ ಮುನ್ನ ನಡೆದ ಏಕದಿನ ಸರಣಿಯ ಮೂರೂ ಪಂದ್ಯದಲ್ಲೂ ವಿಫಲರಾಗಿದ್ದ ಸೂರ್ಯಕುಮಾರ್ ಅಂತಿಮವಾಗಿ ಮೂರನೇ ಟಿ20ಪಂದ್ಯದಲ್ಲಿ ತಂಡದ ಪರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ವಿಂಡೀಸ್ ಪ್ರವಾಸದಲ್ಲಿ ಮೊದಲ ಅರ್ಧಶತಕ ಸಿಡಿಸಿದ ಸೂರ್ಯ, ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಸೂರ್ಯ, ಕೇವಲ 44 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 83 ರನ್​ಗಳ ಗೆಲುವಿನ ಇನ್ನಿಂಗ್ಸ್ ಆಡಿದರು. ಸೂರ್ಯ ಅವರ ಈ ಇನ್ನಿಂಗ್ಸ್ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿತು.

ವಾಸ್ತವವಾಗಿ ಈ ಪಂದ್ಯ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಏಕೆಂದರೆ ಈ ಪಂದ್ಯದಲ್ಲಿ ಭಾರತ ಸೋತಿದ್ದರೆ, ಇನ್ನು ಎರಡು ಪಂದ್ಯಗಳು ಬಾಕಿ ಇರುವಂತೆಯೇ ಟೀಂ ಇಂಡಿಯಾ ಟಿ20 ಸರಣಿಯನ್ನು ಕಳೆದುಕೊಳ್ಳುತ್ತಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಿಂಡೀಸ್ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತು. 160 ರನ್‌ಗಳ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಟೀಂ ಇಂಡಿಯಾ ಪರ ಟಿ20 ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಯಶಸ್ವಿ ಜೈಸ್ವಾಸ್ ಮೊದಲ ಓವರ್‌ನಲ್ಲೇ ಔಟಾದರು. ಅವರ ನಂತರ ಶುಭಮನ್ ಗಿಲ್ ಕೂಡ ಬೇಗನೆ ಪೆವಿಲಿಯನ್‌ಗೆ ಮರಳಿದರು. ಹೀಗಾಗಿ ಭಾರತ ಆರಂಭದಲ್ಲೇ ಸೋಲಿನ ದವಡೆಗೆ ಸಿಲುಕಿತು.

IND vs WI: ಅರ್ಧಶತಕ ಸಿಡಿಸಿ ಸೂರ್ಯಕುಮಾರ್ ದಾಖಲೆ ಮುರಿದ ತಿಲಕ್ ವರ್ಮಾ

51 ಎಸೆತಗಳಲ್ಲಿ 87 ರನ್‌ಗಳ ಜೊತೆಯಾಟ

ಹೀಗಾಗಿ ಮೂರನೇ ಕ್ರಮಾಂಕದಲ್ಲಿ ಬಂದ ಸೂರ್ಯಕುಮಾರ್ ಯಾದವ್ ಮತ್ತು ನಾಲ್ಕನೇ ಕ್ರಮಾಂದಲ್ಲಿ ಬಂದ ತಿಲಕ್ ವರ್ಮಾ ಮೇಲೆ ಸಾಕಷ್ಟು ಜವಬ್ದಾರಿ ಇತ್ತು. ಕೊನೆಗೂ ತಂಡದ ನಿರೀಕ್ಷೆಯಂತೆ ಬ್ಯಾಟ್ ಬೀಸಿದ ಈ ಇಬ್ಬರೂ 51 ಎಸೆತಗಳಲ್ಲಿ 87 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಏತನ್ಮಧ್ಯೆ, ಸೂರ್ಯಕುಮಾರ್ ಈ ಪ್ರವಾಸದಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಪೂರ್ಣಗೊಳಿಸಿದರು. ಸೂರ್ಯಕುಮಾರ್ 23 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆ ಬಳಿಕವೂ ಸ್ಫೋಟಕ ಬ್ಯಾಟಿಂಗ್ ಮುಂದುವರೆಸಿದ ಸೂರ್ಯ, 83 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿ ಶತಕ ವಂಚಿತರಾದರು.

ಜನವರಿ ನಂತರ ಮೊದಲ ಅರ್ಧಶತಕ

ಇದು ಐದು ಇನ್ನಿಂಗ್ಸ್‌ಗಳ ನಂತರ ಟಿ20ಯಲ್ಲಿ ಸೂರ್ಯಕುಮಾರ್ ಅವರ ಮೊದಲ ಅರ್ಧಶತಕವಾಗಿದೆ. ಈ ಪಂದ್ಯಕ್ಕೂ ಮುನ್ನ 2023ರ ಜನವರಿ 7ರಂದು ರಾಜ್‌ಕೋಟ್‌ನಲ್ಲಿ ಶ್ರೀಲಂಕಾ ವಿರುದ್ಧ ಸೂರ್ಯಕುಮಾರ್ ಶತಕ ಸಿಡಿಸಿದ್ದರು. ಆ ಪಂದ್ಯದ ನಂತರ ಇದೀಗ ಸೂರ್ಯಕುಮಾರ್ ಆಗಸ್ಟ್‌ನಲ್ಲಿ 50ರ ಗಡಿ ದಾಟಿದ್ದಾರೆ. ಈ ಇನ್ನಿಂಗ್ಸ್‌ನಲ್ಲಿ ಸೂರ್ಯಕುಮಾರ್ ಕೂಡ ದಾಖಲೆ ಬರೆದಿದ್ದು, ಟಿ20ಯಲ್ಲಿ ಭಾರತ ಪರ ಅತಿವೇಗವಾಗಿ 100 ಸಿಕ್ಸರ್ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:11 am, Wed, 9 August 23

ತಾಜಾ ಸುದ್ದಿ



Leave A Reply

Your email address will not be published.