EBM News Kannada
Leading News Portal in Kannada

ಛತ್ತೀಸ್​ಗಢ: ಗೆಳೆಯನ ಮೇಲೆ ಕೋಪಗೊಂಡು 80 ಅಡಿ ಎತ್ತರದ ಹೈಟೆನ್ಷನ್ ವಿದ್ಯುತ್ ಟವರ್ ಏರಿದ ಯುವತಿ – Kannada News | In a fit of rage at her boyfriend, a girl climbed an 80 feet high tower of high tension power line in Chhattisgarh

0


ತನ್ನ ಪ್ರಿಯಕರನ ಮೇಲಿನ ಕೋಪದ ಭರದಲ್ಲಿ, ಹುಡುಗಿಯೊಬ್ಬಳು 80 ಅಡಿ ಎತ್ತರದ ಹೈ ಟೆನ್ಷನ್ ವಿದ್ಯುತ್ ಟವರ್ ಹತ್ತಿದ ಘಟನೆ ಛತ್ತೀಸ್‌ಗಢದ ಗೌರೆಲಾ ಪೇಂದ್ರ ಮಾರ್ವಾಹಿ ಜಿಲ್ಲೆಯಲ್ಲಿ ನಡೆದಿದೆ.

ಛತ್ತೀಸ್​ಗಢ ಯುವತಿ

Image Credit source: India Today

ತನ್ನ ಪ್ರಿಯಕರನ ಮೇಲಿನ ಕೋಪದ ಭರದಲ್ಲಿ, ಹುಡುಗಿಯೊಬ್ಬಳು 80 ಅಡಿ ಎತ್ತರದ ಹೈ ಟೆನ್ಷನ್ ವಿದ್ಯುತ್ ಟವರ್ ಹತ್ತಿದ ಘಟನೆ ಛತ್ತೀಸ್‌ಗಢದ ಗೌರೆಲಾ ಪೇಂದ್ರ ಮಾರ್ವಾಹಿ ಜಿಲ್ಲೆಯಲ್ಲಿ ನಡೆದಿದೆ. ಆಕೆಯ ಗೆಳೆಯ ಕೂಡ ಆಕೆಯನ್ನು ಹಿಂಬಾಲಿಸಿ ಟವರ್ ಅನ್ನು ಹತ್ತಿದ್ದಾನೆ. ಈ ಘಟನೆ ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕೆಲ ಸ್ಥಳೀಯರು ಟವರ್​ ಅಲ್ಲಿ ಇಬ್ಬರಿರುವುದನ್ನು ಗಮನಿಸಿದ್ದರು ತಕ್ಷಣ ಪೆಂಡ್ರಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಘಟನೆಯ ಬಗ್ಗೆ ಇಬ್ಬರ ಕುಟುಂಬಗಳಿಗೂ ಮಾಹಿತಿ ನೀಡಿದ್ದರು, ಪೊಲೀಸರು ಬರುವಷ್ಟರಲ್ಲಿ ಗ್ರಾಮಸ್ಥರು ಅಲ್ಲಿ ಜಮಾಯಿಸಿದ್ದರು.

ಪೊಲೀಸ್ ಅಧಿಕಾರಿಗಳು ಇಬ್ಬರ ಜತೆ ದೀರ್ಘಕಾಲ ಮಾತುಕತೆ ನಡೆಸಿ, ಕೆಳಗೆ ಇಳಿಸಲು ಮನವೊಲಿಸಲು ಪ್ರಯತ್ನಿಸಿದರು. ಗಂಟೆಗಟ್ಟಲೆ ಹೋರಾಟ ನಡೆಸಿದ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಅಲ್ಲೇ ಇದ್ದ ವ್ಯಕ್ತಿಯೊಬನ್ಬ ಇಡೀ ಘಟನೆಯ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.

ಮತ್ತಷ್ಟು ಓದಿ: ಪ್ರೀತಿ ಪ್ರೇಮದ ಹೆಸರಿನಲ್ಲಿ ಮೋಸ: ಆತನನ್ನು ಬಿಟ್ಟಿರಲಾರೆಂದು ಯುವಕನ ಮನೆ ಮುಂದೆ ಯುವತಿ ಧರಣಿ

ಯುವತಿ ಟವರ್ ಏರುವ ಕೆಲವೇ ಗಂಟೆಗಳ ಮೊದಲು ತನ್ನ ಗೆಳೆಯನೊಂದಿಗೆ ಕರೆ ಮಾಡಿ ತೀವ್ರ ವಾಗ್ವಾದ ನಡೆಸಿದ್ದಳು. ಕೆಳಗೆ ಬರುವಂತೆ ಮನವೊಲಿಸಲು ಆಕೆಯ ಗೆಳೆಯನೂ ಅವಳನ್ನು ಹಿಂಬಾಲಿಸಿದ. ಇಬ್ಬರೂ ಕೂಡ ಯಾವುದೇ ತೊಂದರೆ ಆಗದೆ ಕೆಳಗಿಳಿದಿದ್ದಾರೆ.

ತಾಜಾ ಸುದ್ದಿ

Leave A Reply

Your email address will not be published.