ನವದೆಹಲಿ, ಮೇ 26: ಕೊರೊನಾವೈರಸ್ ನಿಂದಾಗಿ ಲಾಕ್ಡೌನ್ ಜಾರಿಯಲ್ಲಿರುವುದರಿಂದ ವರ್ಕ್ ಫ್ರಾಮ್ ಹೋಮ್(WFH) ಹೊಸ ಕಾರ್ಯ ವಿಧಾನವಾಗಿ ಪರಿಣಮಿಸಿದೆ. WFH ಮಾಡುವ ಉದ್ಯೋಗಿಗಳು, ಆನ್ ಲೈನ್ ಕ್ಲಾಸ್ ತೆಗೆದುಕೊಳ್ಳುವ ಶಿಕ್ಷಕರು, ಆನ್ ಲೈನ್ ವೈದ್ಯಕೀಯ ನೆರವು ಹೀಗೆ ಎಲ್ಲರೂ ಜೂಮ್ ಮೀಟಿಂಗ್ ಅಪ್ಲಿಕೇಷನ್ ಗೆ ಮೊರೆ ಹೋಗಿದ್ದಾರೆ.
ಜೂಮ್ ಮೀಟಿಂಗ್ ಆಪ್ ಸರ್ಕಾರಿ ಅಧಿಕಾರಿಗಳಿಗೆ ಮತ್ತು ಸರ್ಕಾರಿ ಸಂಬಂಧ ಚರ್ಚೆಗೆ ಸೂಕ್ತ ಹಾಗೂ ಸುರಕ್ಷಿತ ವೇದಿಕೆಯಲ್ಲ. ಇನ್ನು, ಖಾಸಗಿ ಕಂಪನಿಗಳು ಅಥವಾ ವೈಯಕ್ತಿಕ ಚರ್ಚೆಗೆ ಆಪ್ ಬಳಸುವವರು ಕೇಂದ್ರ ಗೃಹ ಸಚಿವಾಲಯ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ತಿಳಿಸಲಾಗಿದೆ.
10 ಕಂಪನಿ ಉತ್ಪನ್ನ ಪಟ್ಟಿ ಮಾಡಿದ ಸರ್ಕಾರ: ಜೂಮ್, ಗೂಗಲ್ ಹ್ಯಾಂಗ್ ಔಟ್ಸ್, ಮೈಕ್ರೋಸಾಫ್ಟ್ ಟೀಮ್ಸ್ ಸ್ಕೈಪ್ ಹಾಗೂ ಇನ್ನಿತರ ಜನಪ್ರಿಯ ಉತ್ಪನ್ನಗಳ ಬದಲಿಗೆ ಹೊಸ ವಿಡಿಯೋ ಕಾನ್ಫರೆನ್ಸ್ ಅಪ್ಲಿಕೇಷನ್ ತಯಾರಿಸಲು ಕೇಂದ್ರ ಸರ್ಕಾರವು ಕರೆ ನೀಡಿತ್ತು. ಈಗ 10 ಕಂಪನಿ ಉತ್ಪನ್ನ ಪಟ್ಟಿ ಮಾಡಿದ್ದು, ಎಲ್ಲಾ ಸಂಸ್ಥೆಗಳಿಗೂ 5 ಲಕ್ಷ ರು ನೀಡಲಾಗುತ್ತದೆ.
5 ಲಕ್ಷ ರು ಪ್ರೋತ್ಸಾಹ ಮೊತ್ತ ಪಡೆದ ಎಲ್ಲಾ 10 ಕಂಪನಿಗಳ ಪೈಕಿ 3 ಕಂಪನಿಗಳು ಮಾತ್ರ ಮುಂದಿನ ಹಂತ ತಲುಪಲಿವೆ. ಆ ಸಂಸ್ಥೆಗಳ ಉತ್ಪನ್ನಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಆ 3 ಕಂಪನಿಗಳ ತಂತ್ರಜ್ಞರು ಈ ಉತ್ಪನ್ನ(ವಿಡಿಯೋ ಕಾನ್ಫರೆನ್ಸ್ ವೇದಿಕೆ)ದ ಸಂಶೋಧನೆ ಹಾಗೂ ಅಭಿವೃದ್ಧಿಗಾಗಿ 20 ಲಕ್ಷ ರು ಗಳನ್ನು ಪಡೆಯಲಿದ್ದಾರೆ.