ಕೊರೋನಾದಿಂದ ಚೇತರಿಕೆ ಕಂಡ ಬಳಿಕ ಗಂಡು ಮಗುವಿಗೆ ಜನ್ಮ ನೀಡಿದ ಬ್ರಿಟನ್ ಪ್ರಧಾನಿ ಜಾನ್ಸನ್- ಸಂಗಾತಿ ಸೈಮಂಡ್ಸ್
ನವದೆಹಲಿ(ಏ.29): ಕೊರೋನಾ ವೈರಸ್ನಿಂದ ಸಂಪೂರ್ಣ ಚೇತರಿಕೆ ಕಂಡ ಬಳಿಕ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಪತ್ನಿ ಕ್ಯಾರಿ ಸೈಮಂಡ್ಸ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜಾನ್ಸನ್ ಪತ್ನಿ ಮತ್ತು ಗಂಡು ಮಗು ಇಬ್ಬರೂ ಆರೋಗ್ಯವಾಗಿದ್ಧಾರೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಎಂದು ತಿಳಿಸಿದೆ.
ಬ್ರಿಟನ್ ಪ್ರಧಾ ಬೋರಿಸ್ ಕೊರೋನಾ ಸೋಂಕಿನಿಂದ ಬಳಲುತ್ತಿದ್ದರು. ಬಳಿಕ ಇವರನ್ನು ಪ್ರತ್ಯೇಕವಾಗಿರಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇದೇ ವೇಳೆ ಜಾನ್ಸನ್ ಪತ್ನಿಗೂ ಕೋವಿಡ್-19 ರೋಗ ಲಕ್ಷಣಗಳಿದ್ದವು. ಹೀಗಾಗಿ ಇಬ್ಬರೂ ಅನಾರೋಗ್ಯಕ್ಕೀಡಾಗಿದ್ದರು.
ಇನ್ನು, ಎರಡು ವಾರಗಳು ಐಸಿಯುನಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಆರೋಗ್ಯದಲ್ಲಿ ಚೇತರಿಕೆ ಕಂಡ ಜಾನ್ಸನ್ ಏಪ್ರಿಲ್ 27ನೇ ತಾರೀಕಿನಿಂದ ಕಚೇರಿಗೆ ಮರಳಿದರು. ಎಂದಿನಂತೆಯೇ ಕೆಲಸ ಆರಂಭಿಸಿ ಎರಡು ದಿನಗಳಾದ ನಂತರ ಹೀಗೆ ಜಾನ್ಸನ್ ದಂಪತಿ ಗಂಡು ಮಗುವಿಗೆ ಜನ್ಮ ನೀಡಿದೆ.
ಜಾನ್ಸನ್ ಎರಡನೇ ಪತ್ನಿಗೆ ಈಗಾಗಲೇ ನಾಲ್ಕು ಮಕ್ಕಳಿದ್ದಾರೆ. ವಿವಾಹೇತರ ಸಂಬಂಧ ಹೊಂದಿದ್ದ ಮತ್ತೋರ್ವ ಸಂಗಾತಿಯೊಂದಿಗೆ ಒಂದು ಮಗುವಿದೆ. ಇದೀಗ ಮತ್ತೋರ್ವ ಸಂಗಾತಿಗೆ ಈಗ ಮಗು ಆಗಿದೆ.