EBM News Kannada
Leading News Portal in Kannada

ಏಲಿಯನ್​ಗಳಾ? ಆಗಸದಲ್ಲಿ ನಿಗೂಢ ಬೆಂಕಿಯುಂಡೆ; ಕೊರೋನಾಪೀಡಿತ ಇಂಗ್ಲೆಂಡ್​ನಲ್ಲಿ ಬೆಚ್ಚಿಬಿದ್ದ ಜನರು

0

ಲಂಡನ್: ಕೊರೋನಾ ಸೋಂಕಿನಿಂದ ಕಂಗೆಟ್ಟಿರುವ ಇಂಗ್ಲೆಂಡ್​ನ ಜನರು ನಿನ್ನೆ ರಾತ್ರಿ ಆಗಸದಲ್ಲಿ ವಿಚಿತ್ರ ದೃಶ್ಯಕ್ಕೆ ಸಾಕ್ಷಿಯಾದರು. ಅಲ್ಲಿಯ ಆಕಾಶದಲ್ಲಿ ಬೆಂಕಿ ಸುಳಿಗಾಳಿ ಹೋಗುತ್ತಿರುವಂತೆ ತೋರುವ ದೃಶ್ಯ ಕಂಡಿತ್ತು. ಬೆಂಕಿಯ ದೊಡ್ಡ ವಸ್ತುವೊಂದು ಹಾರಿ ಹೋಗುತ್ತಾ ಅದರ ಹಿಂದೆ ತಿರುತಿರುಗುತ್ತಿರುವ ಬಾಲ ಮೂಡಿಸಿದಂತಿತ್ತು. ಜನರಿಗೆ ಇದು ಏನು ಎಂಬುದು ಸ್ಪಷ್ಟವಾಗಿ ತಿಳಿಯದಂತಿತ್ತು. ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಿದ್ಧಾರೆ. ಕೆಲವರು ಇದನ್ನು ಏಲಿಯನ್​​ಗಳ ಆಟವೆನ್ನುತ್ತಿದ್ದಾರೆ. ಕೆಲವರು ಇದು ಧೂಮಕೇತು ಎನ್ನುತ್ತಿದ್ಧಾರೆ.

ಗೆರಿ ಅಂಡರ್​ವುಡ್ ಎಂಬ ಸ್ಟಾರ್ ಶೂಟರ್ ಅವರು ಧೂಮಕೇತುವಿನ ಸಾಧ್ಯತೆಯನ್ನು ತಳ್ಳಿಹಾಕುತ್ತಾರೆ. ಧೂಮಕೇತುವಾದರೆ ಕೆಲವೇ ಕ್ಷಣಗಳಲ್ಲಿ ಬಂದು ಮಾಯವಾಗಿಬಿಡುತ್ತದೆ. ಇದು ಸುಮಾರು 20 ನಿಮಿಷಗಳವರೆಗೆ ಕಣ್ಣಿಗೆ ನಿಲುಕಿತ್ತು ಎಂದು ಇವರು ಹೇಳುತ್ತಾರೆ.

ಇದನ್ನೂ ಓದಿ: ಲಾಕ್​ಡೌನ್​ ಪೂರ್ಣಗೊಳ್ಳುವವರೆಗೂ ಇ-ಕಾಮರ್ಸ್​ ವ್ಯವಹಾರಕ್ಕಿಲ್ಲ ಅವಕಾಶ; ಕೇಂದ್ರದ ಸ್ಪಷ್ಟನೆ

ನ್ಯಾಷನಲ್ ಸ್ಪೇಸ್ ಅಕಾಡೆಮಿ ಸಂಸ್ಥೆ ಈ ಘಟನೆಯನ್ನು ಪರಿಶೀಲಿಸಿದ್ದು, ಈ ನಿಗೂಢ ವಸ್ತು ಏನೆಂದು ಸ್ಪಷ್ಟಪಡಿಸಿಲ್ಲ. ಆದರೆ, ಎತ್ತರದಲ್ಲಿ ಹೋಗುತ್ತಿದ್ದ ಜೆಟ್​ನಿಂದ ನಿರ್ಮಾಣವಾದ ಹೊಗೆ ಹೀಗೆ ಕಂಡಿರಬಹುದು. ಅಸ್ತಂಗತಗೊಳ್ಳುತ್ತಿರುವ ಸೂರ್ಯನ ಕಿರಣಗಳು ಪ್ರತಿಫಲಿಸಿ ಈ ರೀತಿ ಕೆಂಪಗೆ ಕಂಡಿರಬಹುದು. ಜೆಟ್ ವಿಮಾನ ಹೊರಳಾಡುತ್ತಾ ಹೋಗಿದ್ದರಿಂದಾಗಿಯೋ ಅಥವಾ ಬೀಸುತ್ತಿರುವ ಗಾಳಿಯಿಂದಾಗಿಯೂ ಹೊಗೆಯು ಸುರಳಿ ಸುತ್ತಿಕೊಂಡು ಹೋದಂತೆ ಕಂಡಿರಬಹುದು ಎಂದು ನ್ಯಾಷನಲ್ ಸ್ಪೇಸ್ ಅಕಾಡೆಮಿ ಅಭಿಪ್ರಾಯಪಟ್ಟಿದೆ.

Leave A Reply

Your email address will not be published.