3 ಸಾವಿರ ಅಲ್ಲವೇ ಅಲ್ಲ; ಕೊರೋನಾಗೆ ಚೀನಾದಲ್ಲಿ ಮೃತಪಟ್ಟವರ ಅಸಲಿ ಸಂಖ್ಯೆ ಎಷ್ಟು ಗೊತ್ತಾ?
ಕೊರೋನಾ ವೈರಸ್ ವಿಶ್ವಾದ್ಯಂತ 1 ಲಕ್ಷ ಜನರನ್ನು ಬಲಿ ತೆಗೆದುಕೊಂಡಿದೆ. 17.30 ಲಕ್ಷ ಜನರಿಗೆ ಕೊರೋನಾ ಸೋಂಕು ತಗುಲಿದೆ. ವಿಶ್ವದ ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ಮೊದಲಿರುವ ಅಮೆರಿಕ ಬಳಿ ಕೊರೋನಾ ವೈರಸ್ ನಿಯಂತ್ರಣ ಸಾಧ್ಯವೇ ಆಗುತ್ತಿಲ್ಲ. ಈಗಾಗಲೇ ಅಮೆರಿಕದಲ್ಲಿ 20 ಜನರು ಕೊರೋನಾದಿಂದ ಮೃತಪಟ್ಟಿದ್ದು, ವಿಶ್ವದಲ್ಲಿ ಸಾವಿನ ಸಂಖ್ಯೆಯಲ್ಲಿ ಅಮೆರಿಕ ಮೊದಲ ಸ್ಥಾನಕ್ಕೇರಿದೆ. 5 ಲಕ್ಷ ಕೊರೋನಾ ಸೋಂಕಿತರು ಅಮೆರಿಕದಲ್ಲಿದ್ದಾರೆ. ಸ್ಪೇನ್ ಕೂಡ ಈ ಭೀಕರ ವೈರಸ್ ದಾಳಿಗೆ ತತ್ತರಿಸಿದೆ. 1.63 ಲಕ್ಷ ಜನರಲ್ಲಿ ಕೊರೋನಾ ಸೋಂಕು ಇದೆ. 16 ಸಾವಿರ ಮಂದಿ ಸತ್ತಿದ್ದಾರೆ. ಇಟಲಿಯಲ್ಲಿ 15 ಲಕ್ಷ ಜನರಿಗೆ ಸೋಂಕು ಅಂಟಿದ್ದು, 19 ಸಾವಿರ ಮಂದಿ ಅಸುನೀಗಿದ್ದಾರೆ