ದೇಶದಲ್ಲಿ 50 ಸಾವು: ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 124ಕ್ಕೆ ಏರಿಕೆ
ಕೊರೊನಾ ವೈರಸ್‌ಗೆ ಚೀನಾದ ವುಹಾನ್ ಜನ್ಮಸ್ಥಳ ಎನ್ನುವುದು ಗೊತ್ತಿರುವ ವಿಚಾರ. ಇದೀಗ, ದೆಹಲಿಯ ಜಮಾತ್ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ ಭಾರತ ದೇಶಕ್ಕೆ ಭಾರಿ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ಯಾಕಂದ್ರೆ, ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ಹೆಚ್ಚು ಕೊರೊನಾ ಸೋಂಕು ತಗುಲಿದೆ. ದೇಶದಲ್ಲಿ ಇದುವರೆಗೂ 2032ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, 50ಕ್ಕೂ ಅಧಿಕ ಸಾವು ಸಂಭವಿಸಿದೆ. ಈ ಕಡೆ ಕರ್ನಾಟಕದಲ್ಲೂ ಸೋಂಕಿತರ ಸಂಖ್ಯೆ 124ಕ್ಕೆ ಏರಿದೆ.
* ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1965ಕ್ಕೆ ಏರಿದೆ. ಇದರಲ್ಲಿ 50 ಜನರು ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 124ಕ್ಕೆ ಏರಿದೆ. ಒಟ್ಟು ದೇಶದಲ್ಲಿ 151 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಜಮಾತ್ ಮಸೀದಿಗೆ ಹೋಗಿದ್ದ 391 ಜನ ಕರ್ನಾಟಕದವರು * ಕರ್ನಾಟಕದ 391 ಮಂದಿ ದೆಹಲಿಯ ಜಮಾತ್ ಮಸೀದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು, ಅವರನ್ನು ಪತ್ತೆ ಹಚ್ಚಿ ಗೃಹಬಂಧನದಲ್ಲಿಡಲಾಗಿದೆ. ಬೀದರ್‌ನಲ್ಲಿ 91 ಮಂದಿಯ ಪರೀಕ್ಷೆ ಮಾಡಲಾಗಿದ್ದು ಅದರಲ್ಲಿ 11 ಮಂದಿಗೆ ಕೊರೊನಾ ಇರುವುದು ಪತ್ತೆಯಾಗಿದೆ ಎಂದು ಸರ್ಕಾರ ತಿಳಿಸಿದೆ. ಎಚ್‌ಡಿಎಫ್‌ಸಿ ದೇಣಿಗೆ * ಎಚ್‌ಡಿಎಫ್‌ಸಿ ಗ್ರೂಪ್ ಪಿಎಂ ಕೇರ್ ಫಂಡ್‌ಗೆ 150 ಕೋಟಿ ರೂ ದೇಣಿಗೆ ನೀಡಿದೆ. ಕೊರೊನಾ ಭಯದಿಂದ ಆತ್ಮಹತ್ಯೆ * ಉತ್ತರಪ್ರದೇಶ: ಕೊರೊನಾ ವೈರಸ್ ಭಯದಿಂದ ಸರ್ಕಾರಿ ನೌಕರರೊಬ್ಬರು ಕಚೇರಿಯಲ್ಲೇ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ನೋಟ್‌ನಲ್ಲಿ ಅದನ್ನು ಬರೆದಿದ್ದಾರೆ. ಆದರೆ ಸಾಕಷ್ಟು ದಿನಗಳಿಂದ ಅವರು ಖಿನ್ನತೆಗೆ ಒಳಗಾಗಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.
ಕರ್ನಾಟಕ 9ನೇ ಸ್ಥಾನದಲ್ಲಿದೆ * ರಾಜ್ಯದಲ್ಲಿ 124 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ದೇಶದಲ್ಲಿ ಕರ್ನಾಟಕ 9ನೇ ಸ್ಥಾನದಲ್ಲಿದೆ. ಕೊವಿಡ್ ಸೋಂಕು ಜಾಗತಿಕ ಮಟ್ಟದಲ್ಲಿ ಚಿಂತೆಯನ್ನುಂಟು ಮಾಡಿದೆ. ಆದರೆ ಎಲ್ಲರೂ ಸೇರಿ ಇದನ್ನು ಹೋಗಲಾಡಿಸುವ ಅಗತ್ಯವಿದೆ. ಆಹಾರ ಪೂರೈಕೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಜನರಿಗೆ ಸೂಕ್ತ ಮಾಹಿತಿ ಒದಗಿಸಬೇಕು. ಮುಂದಿನ ದಿನಗಳಲ್ಲಿ ವೈದ್ಯರ ಕೊರತೆಯಾಗದಂತೆ ಈಗಲೇ ಆಯುಷ್ ಐದ್ಯರಿಗೆ ಆನ್‌ಲೈನ್ ತರಬೇತಿ ನೀಡಬೇಕೆಂದು ಪ್ರಧಾನಿ ಹೇಳಿರುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ. 7 ರಿಂದ 9 ನೇ ತರಗತಿಗೆ ಪರೀಕ್ಷೆ ಇಲ್ಲ
* ಕರ್ನಾಟಕದಲ್ಲಿ 7 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುವುದಿಲ್ಲ, ಮುಂದಿನ ತರಗತಿಗೆ ಬಡ್ತಿ ನೀಡಿ ಶಿಕ್ಷಣ ಇಲಾಖೆ ಆದೇಶ, ಏಪ್ರಿಲ್ 14ರ ಬಳಿಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ದಿನಾಂಕ ನಿಗದಿ. ಕೇರಳದಲ್ಲಿ ಮದ್ಯಪಾನ ಮತ್ತೆ ಬಂದ್ * ಮದ್ಯಪಾನ ಮಾಡದೆ ಸಾಕಷ್ಟು ಮಂದಿ ಕೇರಳದಲ್ಲಿ ಪ್ರಾಣ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ವೈದ್ಯರ ಒಪ್ಪಿಗೆ ಪಡೆದು ಮದ್ಯಪಾನ ಮಾಡಬಹುದೆಂದು ಕೇರಳ ಸರ್ಕಾರ ನೀಡಿದ್ದ ಸೂಚನೆಗೆ ಹೈಕೋರ್ಟ್ ತಡೆ ನೀಡಿದೆ. ದೆಹಲಿಗೆ ಕಂಟಕ ತಂದ ಜಮಾತ್ * ದೆಹಲಿಯಲ್ಲಿ ಇರುವ ಒಟ್ಟು 216 ರೋಗಿಗಳ ಪೈಕಿ 188 ಮಂದಿ ಜಮಾತ್‌ನಲ್ಲಿ ಭಾಗವಹಿಸಿದ್ದವರಾಗಿದ್ದಾರೆ ಎಂದು ಲೋಕನಾಯಕ ಜಯ ಪ್ರಕಾಶ್ ನಾರಾಯಣ್ ಆಸ್ಪತ್ರೆಯ ನಿರ್ದೇಶಕ ಕಿಶೋರ್ ಸಿಂಗ್ ತಿಳಿಸಿದ್ದಾರೆ. ಜಮಾತ್‌ನಲ್ಲಿ ಬೆಂಗಳೂರಿಗರ ಸಂಖ್ಯೆ
* ಬೆಂಗಳೂರಿನಿಂದ ಜಮಾತ್‌ಗೆ ಹೋಗಿದ್ದವರು 210 ಮಂದಿ, ಬೆಂಗಳೂರು ಪಶ್ಚಿಮ ವಿಭಾಗದಿಂದ 27 ಮಂದಿ ಭಾಗಿ, 10 ಮಂದಿಯನ್ನು ಕ್ವಾರಂಟೈನ್‌ನಲ್ಲಿಡಲಾಗಿದ್ದು 17 ಮಂದಿಗೆ ಹುಡುಕಾಟ, ಬೆಂಗಳೂರು ಉತ್ತರ ವಿಭಾಗದಲ್ಲಿ 77 ಮಂದಿ, 25 ಮಂದಿ ಐಸೋಲೇಷನ್‌ನಲ್ಲಿದ್ದು , ನಾಲ್ವರಲ್ಲಿ ಸೋಂಕು ಪತ್ತೆ, ವೈಟ್‌ಫೀಲ್ಡ್ ವಿಭಾಗದಲ್ಲಿ 73 ಮಂದಿ ಭಾಗಿ, 21 ಜನರ ಪತ್ತೆ 15 ಮಂದಿ ಹರಿಯಾಣದಲ್ಲಿ ಉಳಿದಿದ್ದಾರೆ. ಜೈಲು ಶಿಕ್ಷೆ ವಿಧಿಸಿದ ಕೋರ್ಟ್
* ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೇರಲಾಗಿರುವ ಲಾಕ್‌ಡೌನ್ ಉಲ್ಲಂಘಿಸಿದ್ದ ಮಹಾರಾಷ್ಟ್ರದ ಮೂವರನ್ನು ಅಲ್ಲಿನ ಸರ್ಕಾರ ಜೈಲಿಗೆ ತಳ್ಳಿದೆ. ದೇಶದಲ್ಲಿ ಲಾಕ್ ಡೌನ್ ಉಲ್ಲಂಘಿಸಿದವರಿಗೆ ಶಿಕ್ಷೆಯಾಗುತ್ತಿರುವ ಮೊದಲ ಪ್ರಕರಣ ಇದಾಗಿದೆ. ಲಾಕ್‌ಡೌನ್ ಉಲ್ಲಂಘಿಸಿ ಹೊರಗೆ ತಿರುಗಾಡುತ್ತಿದ್ದ ಮೂವರಿಗೆ ಮಹಾರಾಷ್ಟ್ರದ ಬಾರಾಮತಿ ಕೋರ್ಟ್ ಮೂರು ದಿನ ಜೈಲುಶಿಕ್ಷೆ ವಿಧಿಸಿ ಆದೇಶ ನೀಡಿದೆ. ಹೆದ್ದಾರಿ ಬಂದ್ ತೆರವು ಮಾಡಲ್ಲ
* ಕೇರಳ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಡಮಾಡದೇ ರಾಷ್ಟ್ರೀಯ ಹೆದ್ದಾರಿ ಬಂದ್ ಅನ್ನು ಕೂಡಲೇ ತೆರವುಗೊಳಿಸುವಂತೆ ಕೇರಳ ಹೈಕೋರ್ಟ್, ಮಧ್ಯಂತರ ಆದೇಶ ನೀಡಿದೆ. ಕೊಡಗು- ಕೇರಳ ಗಡಿ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಇಲ್ಲಿ ಬಂದ್ ತೆರವುಗೊಳಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಜಗತ್ತಿನ ಅಂಕಿ-ಅಂಶಗಳು
* ಇದುವರೆಗೂ ಜಗತ್ತಿನಲ್ಲಿ ಒಟ್ಟು 949,785 ಜನರಲ್ಲಿ ಕೊರೊನಾ ದೃಢವಾಗಿದೆ. ಅದರಲ್ಲಿ 48,259 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. 201,556 ಜನರು ಈ ಸೋಂಕಿನಿಂದ ಚೇತರಿಕೆ ಕಂಡಿದ್ದಾರೆ. ಇಟಲಿಯಲ್ಲಿ 13,155 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸ್ಪೇನ್ ದೇಶದಲ್ಲಿ 10,003 ಜನರು ಸಾವನ್ನಪ್ಪಿದ್ದಾರೆ.