EBM News Kannada
Leading News Portal in Kannada

ಜಪಾನ್ ನಲ್ಲಿ ಪ್ರಬಲ ಭೂಕಂಪನ, ಇಬ್ಬರ ಸಾವು

0

ಟೋಕಿಯೋ: ಸೋಮವಾರ ಮುಂಜಾನೆ ಜಪಾನ್ ನಲ್ಲಿ ಪ್ರಬಲ ಭೂಕಂನ ಸಂಭವಿಸಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಪಶ್ಚಿಮ ಜಪಾನ್ ನ ಒಸಾಕದಲ್ಲಿ ಇಂದು ಮುಂಜಾನೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.1ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪನದ ತೀವ್ರತೆಗೆ ಒಸಾಕ ನಗರದ ಹಲವು ಬಹುಮಹಡಿ ಕಟ್ಟಡಗಳು ನೆಲಕ್ಕುರುಳಿವೆ. ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಈ ಪೈಕಿ 9 ವರ್ಷದ ಹೆಣ್ಣು ಮಗು ಕೂಡ ಸೇರಿದೆ. ಅಂತೆಯೇ ಘಟನೆಯಲ್ಲಿ 37ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಭೂಕಂಪನದಿಂದಾಗಿ ಜಪಾನ್ ನ ಹ್ಯೋಗೋ, ಕ್ಯೋಟೋ, ಶಿಗಾ ಮತ್ತು ನಾರಾ ಪ್ರಾಂತ್ಯಗಳೂ ಹಾನಿಗೀಡಾಗಿವೆ ಎಂದು ತಿಳಿದುಬಂದಿದೆ. ಇನ್ನು ಶಿನ್ಕಾನ್ಸೆನ್ ನಲ್ಲಿ ಬುಲೆಟ್ ರೈಲು ಸೇವೆ ಸ್ಥಗಿತಗೊಂಡಿದ್ದು, ಒಸಾಕಾದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ.

ಇನ್ನು ಪ್ರಬಲ ಭೂಕಂಪದ ಹೊರತಾಗಿಯೂ ಜಪಾನ್ ಭೂಕಂಪನ ಮಾಪನ ಇಲಾಖೆ ಸುನಾಮಿ ಎಚ್ಚರಿಕೆ ನೀಡಿಲ್ಲ. ಸಮುದ್ರದ ಪರಿಸ್ಥಿತಿ ನೋಡಿಕೊಂಡು ಈ ಬಗ್ಗೆ ಮಾಹಿತಿ ನೀಡಿದೆ.

Leave A Reply

Your email address will not be published.