ದೈತ್ಯ ಹೆಬ್ಬಾವಿನ ಹೊಟ್ಟೆ ಸೀಳಿದಾಗ ಕಂಡಿದ್ದು ಮಹಿಳೆ ಮೃತದೇಹ: ಭಯಾನಕ ವಿಡಿಯೋ
ಮಕಸರ್(ಇಂಡೋನೇಷ್ಯಾ): ತಮ್ಮ ಹೊಲಕ್ಕೆ ಹೋಗಿದ್ದ ರೈತ ಮಹಿಳೆಯೊಬ್ಬರು ಅಲ್ಲಿಂದ ನಾಪತ್ತೆಯಾಗಿದ್ದರಿಂದ ಗಾಬರಿಗೊಂಡ ಸ್ಥಳೀಯರು ಅಲ್ಲೇ ತಿರುಗಾಡಿಕೊಂಡಿದ್ದ ದೈತ್ಯ ಹೆಬ್ಬಾವಿನ ಹೊಟ್ಟೆ ಸೀಳಿದಾಗ ಮಹಿಳೆ ಮೃತದೇಹ ಕಂಡುಬಂದಿದ್ದು ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಇಂಡೋನೇಷ್ಯಾದ ಮುನ ದ್ವೀಪದ ಪರ್ಸಿಯಪಲ್ ಲವೇಲ ಗ್ರಾಮದಲ್ಲಿ ಪತ್ತೆಯಾದ 7 ಮೀಟರ್ ಉದ್ದರ ಹೆಬ್ಬಾವಿನ ಹೊಟ್ಟೆಯನ್ನು ಸೀಳಿ ನೋಡಿದಾಗ ಅದರಲ್ಲಿ 54 ವರ್ಷದ ಮಹಿಳೆಯ ದೇಹ ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ನಾಪತ್ತೆಯಾಗಿದ್ದರಿಂದ ಹೆಬ್ಬಾವೇ ಮಹಿಳೆಯನ್ನು ನುಂಗಿರಬಹುದು ಎಂದು ಅದನ್ನು ಕೊಂದು ಸ್ಥಳೀಯರು ಹೆಬ್ಬಾವಿನ ಹೊಟ್ಟೆ ಸೀಳಿ ನೋಡಿದಾಗ ಮಹಿಳೆ ಮೃತದೇಹ ಪತ್ತೆಯಾಗಿದೆ.
ಜಮೀನಿಗೆ ಹೋದ ಮಹಿಳೆ ರಾತ್ರಿ ಹಿಂದಿರುಗಿ ಬಾರದಾಗ ಸಂಬಂಧಿಕರು ಹಾಗೂ ಗ್ರಾಮಸ್ಥರು ಗಾಬರಿಗೊಂಡರು. ಗ್ರಾಮಸ್ಥರು ಆಕೆಯ ಹುಡುಕಾಟದಲ್ಲಿ ತೊಡಗಿದ್ದಾಗ ಮಹಿಳೆಯ ಚಪ್ಪಲಿ ಮತ್ತು ಕತ್ತಿಯಿದ್ದ ಸ್ಥಳದಿಂದ 30 ಮೀಟರ್ ದೂರದಲ್ಲಿ ಹೆಬ್ಬಾವು ಪತ್ತೆಯಾಗಿತ್ತು.