EBM News Kannada
Leading News Portal in Kannada

ಭಾರತೀಯ ಮೂಲದ ದಂಪತಿ ಪ್ರಯಾಣಕ್ಕೆ ಅವಕಾಶ ನಿರಾಕರಣೆ

0

ಸಿಂಗಾಪುರ: ಸುರಕ್ಷತಾ ಕಾರಣಗಳನ್ನು ನೀಡಿ, ತಮ್ಮ ವಿಶೇಷ ಅಗತ್ಯದ ಮಗುವಿನೊಂದಿಗೆ ಪ್ರಯಾಣಿಸಲು ಭಾರತೀಯ ಮೂಲದ ದಂಪತಿಗೆ ಸಿಂಗಾಪುರ ಮೂಲದ ಏರ್‌ಲೈನ್ಸ್‌ ಅವಕಾಶ ನಿರಾಕರಿಸಿದ್ದು, ಇದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಖಂಡನೆ ವ್ಯಕ್ತವಾಗಿದೆ.

ತನ್ನ ಐದು ವರ್ಷದ ಮಗಳಿಗೆ ಶಿಶು ಸೀಟ್‌ ಬೆಲ್ಟ್‌ ನೀಡಿ ಸಿಂಗಾಪುರದಿಂದ ಫುಕೆಟ್‌ಗೆ ತೆರಳಲು ಅವಕಾಶ ನೀಡದ ಸ್ಕೂಟ್‌ ಏರ್‌ಲೈನ್ಸ್‌ ಕ್ಯಾಪ್ಟನ್‌ನಿಂದ ವಿಮಾನದಲ್ಲಿ ಗದ್ದಲ ಉಂಟಾಯಿತು ಎಂದು ದಿವ್ಯ ಜಾರ್ಜ್‌ ಆನ್‌ಲೈನ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ. ದಿವ್ಯಾ ಅವರ ಮಗಳು ಕೇವಲ 8.5 ಕಿ.ಗ್ರಾಂ. ತೂಕ ಹೊಂದಿದೆ. ಆಕೆಗೆ ಸುರಕ್ಷತಾ ಕಾರಣಗಳನ್ನು ನೀಡಿ, ಸೀಟ್‌ ಬೆಲ್ಟ್‌ ಕೋರಿಕೆಯನ್ನು ನಿರಾಕರಿಸಲಾಯಿತು. ದಂಪತಿಯೊಂದಿಗೆ ಮಾತನಾಡಲು ವಿಮಾನದ ಕ್ಯಾಪ್ಟನ್‌ ಒಂದು ಗಂಟೆ ಕಾಯಿಸಿದ್ದು, ನಂತರ ಪ್ರಯಾಣ ಮಾಡದಂತೆ ಅಥವಾ ಕೊಟ್ಟಿರುವ ಸೀಟ್‌ನಲ್ಲಿ ತಮ್ಮ ಮಗಳನ್ನು ಕರೆತರುವಂತೆ ತಿಳಿಸಿದರು ಎಂದು ದಿವ್ಯಾ ದೂರಿದ್ದಾರೆ. ತಾವು ಅನುಭವಿಸಿದ ಪರಿಸ್ಥಿತಿ ಕುರಿತು ಫೇಸ್‌ಬುಕ್‌ನಲ್ಲಿ ದಿವ್ಯ ಹಂಚಿಕೊಂಡಿದ್ದು, ಅವರ ಪರವಾಗಿ ಅಪಾರ ಬೆಂಬಲ ವ್ಯಕ್ತವಾಗಿದೆ.

”ಬೆಳಗ್ಗೆ 7.35ಕ್ಕೆ ವಿಮಾನ ಟೇಕ್‌ಆಫ್‌ ಆಗಬೇಕಿತ್ತು. ಆದರೆ ಒಂದು ಗಂಟೆ ತಡವಾಯಿತು. ಕಾರಣ ಅವರು ನಮ್ಮ ವಿಶೇಷ ಅಗತ್ಯದ ಮಗಳನ್ನು ಜತೆಯಲ್ಲಿ ಕರೆತರಲು ನಿರಾಕರಿಸಿದರು. ನಮಗೆ ಪ್ರಯಾಣಿಸಲು ಅವಕಾಶ ನೀಡಲಿಲ್ಲ” ಎಂದು ದಿವ್ಯಾ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ಕುರಿತು ಸ್ಕೂಟ್‌ ಏರ್‌ಲೈನ್ಸ್‌ ಪ್ರತಿಕ್ರಿಯಿಸಿದ್ದು,”ಪ್ರಯಾಣಿಕ ಮಗು ಐದು ವರ್ಷದ ವಯಸ್ಸಿನದು. ಆಕೆಗೆ ಶಿಶು ಬೆಲ್ಟ್‌ ಸಾಕಾಗುವುದಿಲ್ಲ. ಸ್ಥಾಪಿತ ಕ್ಯಾಬಿನ್‌ ಸುರಕ್ಷ ತೆ ಕಾರ್ಯವಿಧಾನಗಳಿಗೆ ಅನುಗುಣವಾಗಿ ಟೇಕ್‌ಆಫ್‌ ಮತ್ತು ಲ್ಯಾಂಡಿಂಗ್‌ ಸಮಯದಲ್ಲಿ ವಿಮಾನ ಸೀಟ್‌ ಬೆಲ್ಟ್‌ನೊಂದಿಗೆ ತನ್ನ ಸ್ವಂತ ಆಸನಕ್ಕೆ ಕಟ್ಟಬೇಕಾಗುತ್ತದೆ,” ಎಂದು ಹೇಳಿದೆ.

Leave A Reply

Your email address will not be published.