EBM News Kannada
Leading News Portal in Kannada

ಮಲಾಲಗೆ ಗುಂಡಿಕ್ಕಿದ ತಾಲಿಬಾನ್ ಉಗ್ರನ ಹತ್ಯೆ

0

ಹೊಸದಿಲ್ಲಿ: ತಾಲಿಬಾನ್‌ ಮುಖ್ಯಸ್ಥ ಮುಲ್ಲಾ ಫಸ್ಲುಲ್ಲಾ ಅಮೆರಿಕದ ಡ್ರೋನ್‌ ದಾಳಿಗೆ ಬಲಿಯಾಗಿರುವುದಾಗಿ ತಿಳಿದು ಬಂದಿದೆ.

ಗುರುವಾರ ಯುಎಸ್‌ ಸೈನ್ಯ ನಡೆಸಿದ ಭಯೋತ್ಪಾದನ ನಿಗ್ರಹ ದಾಳಿಯಲ್ಲಿ, ತಹ್ರಿಕ್‌ -ಇ- ತಾಲಿಬಾನ್‌ ಪಾಕಿಸ್ತಾನ್‌(ಟಿಟಿಪಿ) ಮುಖ್ಯಸ್ಥ ಫಸ್ಲುಲ್ಲ ಹಾಗೂ ಆತನ ಸಹಚರರು ಹತರಾಗಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಅಮೆರಿಕ ಸೇನಾಪಡೆ ಅಧಿಕೃತ ಮಾಹಿತಿ ಬಹಿರಂಗಪಡಿಸಿದೆ.

ಕುನ್ನಾರ್‌ ಪ್ರಾಂತ್ಯದಲ್ಲಿ ಡ್ರೋನ್‌ ದಾಳಿ ನಡೆಸಲಾಗಿದ್ದು, ಭಯೋತ್ಪಾದನಾ ಸಂಘಟನೆಗಳ ಮುಖ್ಯಸ್ಥರನ್ನು ಗುರಿಯಾಗಿಸಿ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಅಫಘಾನಿಸ್ತಾನದಲ್ಲಿರುವ ಅಮೆರಿಕದ ಲೆಫ್ಟಿನೆಂಟ್‌ ಕ.ಮಾರ್ಟಿನ್ ಮೆಕ್‌ಡೊನೆಲ್‌ ತಿಳಿಸಿದ್ದಾರೆ. 2014ರಲ್ಲಿ ಪಾಕಿಸ್ತಾನದಲ್ಲಿನ ಸೈನಿಕ ಶಾಲೆಯ ಮೇಲೆ ದಾಳಿ ನಡೆಸಿ, 130 ಮಕ್ಕಳನ್ನು ಬಲಿಪಡೆದುಕೊಂಡಿದ್ದ. ಅಂತೆಯೇ 2012ರಲ್ಲಿ ನೋಬಲ್‌ ಪ್ರಶಸ್ತಿ ವಿಜೇತ ಮಲಾಲ ಯುಸಫ್‌ ಝಾಯಿ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ.

Leave A Reply

Your email address will not be published.