EBM News Kannada
Leading News Portal in Kannada

ಮುಷರ್ರಫ್‌ ಸ್ಪರ್ಧೆ ಕನಸಿಗೆ ಎಳ್ಳುನೀರು

0

ಇಸ್ಲಾಮಾಬಾದ್‌: ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರ್ರಫ್‌ ಅವರು ಗುರುವಾರ ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ಕಾರಣ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ನೀಡಿದ್ದ ಷರತ್ತಿನ ಅನುಮತಿಯನ್ನು ಪಾಕಿಸ್ತಾನ ಸುಪ್ರೀಂ ಕೋರ್ಟ್‌ ಹಿಂಪಡೆದಿದೆ. ಈ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಮುಷರ್ರಫ್‌ ಅವರ ಆಶಯವನ್ನು ನ್ಯಾಯಾಲಯ ಮಣ್ಣುಪಾಲು ಮಾಡಿದೆ.

ಜುಲೈ 25ರಂದು ನಡೆಯುವ ಸಾರ್ವತ್ರಿಕ ಚುನಾವಣೆ ಸ್ಪರ್ಧಿಸಲು ನ್ಯಾಯಾಲಯ ಅನುಮತಿ ನೀಡಿದ್ದರಿಂದ ಚಿತ್ರಾಲ್‌ ಉತ್ತರ ಜಿಲ್ಲೆಯಿಂದ ಮುಷರ್ರಫ್‌ ನಾಮಪತ್ರ ಸಲ್ಲಸಿದ್ದರು. ಆದರೆ 2013ರಲ್ಲಿ ಪೇಶಾವರ ಹೈಕೋರ್ಟ್‌ ನೀಡಿದ್ದ ಜೀವನಪರ್ಯಂತ ಅನರ್ಹತೆ ತೀರ್ಪಿನ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಸಂಬಂಧ ವಿಚಾರಣೆಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಿತ್ತು.

ಪ್ರಕರಣದ ವಿಚಾರಣೆ ನಡೆಸುತ್ತಿರುವ ಪಾಕ್‌ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠದ ನೇತೃತ್ವ ವಹಿಸಿರುವ ಪಾಕ್‌ ಮುಖ್ಯ ನ್ಯಾಯಮೂರ್ತಿ ಸಾಕಿಬ್‌ ನಿಸಾರ್‌, ”ಒಬ್ಬ ಕಮಾಂಡೊ ತನ್ನ ದೇಶಕ್ಕೆ ಮರಳಲು ಏಕೆ ಇಷ್ಟು ಭಯಪಡುತ್ತಿದ್ದಾರೆ. ಗುರುವಾರ ಮಧ್ಯಾಹ್ನ ಎರಡು ಗಂಟೆ ಒಳಗೆ ನ್ಯಾಯಾಲಯಕ್ಕೆ ಮುಷರಫ್‌ ಹಾಜರಾಗಬೇಕು,” ಎಂದು ಬುಧವಾರ ಸೂಚಿಸಿದ್ದರು. ”ವಿಚಾರಣೆಗೆ ಹಾಜರಾಗಲು ಮುಷರ್ರಫ್‌ ಸಮಯ ಕೇಳುತ್ತಿದ್ದಾರೆ. ಅವರು ಪಾಕಿಸ್ತಾನಕ್ಕೆ ಬರಲು ಯೋಜಿಸುತ್ತಿದ್ದು, ಆದರೆ ಈದ್‌ ರಜೆಗಳು ಮತ್ತು ಅನಾರೋಗ್ಯದ ಕಾರಣ ಅವರು ತಕ್ಷ ಣ ಪ್ರಯಾಣ ಮಾಡಲು ಸಾಧ್ಯವಿಲ್ಲ,” ಎಂದು ವಕೀಲ ಕಮರ್‌ ಅಫ್ಜಲ್‌ ತಿಳಿಸಿದರು.

ಅನೇಕ ಪ್ರಕರಣಗಳಲ್ಲಿ ಬೇಕಾಗಿರುವ ಮುಷರಫ್‌, ಮಾರ್ಚ್‌ 2016ರಿಂದ ದುಬೈನಲ್ಲಿ ನಲೆಸಿದ್ದಾರೆ. ಅವರು ರಾಜದ್ರೋಹದ ಪ್ರಕರಣ ಎದುರಿಸುತ್ತಿದ್ದು, ವಿಶೇಷ ನ್ಯಾಯಾಲಯಕ್ಕೆ ನಿರಂತರವಾಗಿ ಹಾಜರಾಗದ ಅವರನ್ನು ಪಲಾಯನಗಾರ ಎಂದು ಕೋರ್ಟ್‌ ಘೋಷಿಸಿದೆ.

Leave A Reply

Your email address will not be published.