EBM News Kannada
Leading News Portal in Kannada

ಸಿಂಗಾಪುರ: ಗಾಂಧಿ ಸ್ಮರಣ ಫಲಕ ಅನಾವರಣಗೊಳಿಸಿದ ಪ್ರಧಾನಿ ಮೋದಿ

0

ಸಿಂಗಾಪುರ: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಸಿಂಗಾಪುರದ ಮಾಜಿ ಪ್ರಧಾನಿ ಗೋ ಚೋಕ್ ಟಾಂಗ್ ಅವರು ಇಂದು ರಾಜಧಾನಿ ಕ್ಲಿಫರ್ಡ್ ಪೈಯರ್ ನಲ್ಲಿ ಮಹಾತ್ಮಾ ಗಾಂಧಿಯವರ ಚಿತಾಭಸ್ಮದ ಸ್ಥಳದಲ್ಲಿ ಗೌರವ ಸಲ್ಲಿಸಲು ಸ್ಮರಣ ಫಲಕವನ್ನು ಅನಾವರಣಗೊಳಿಸಿದರು.

ನರೇಂದ್ರಮೋದಿ ಅವರ ಮೂರು ರಾಷ್ಟ್ರಗಳ ಪ್ರವಾಸದ ಕೊನೆಯ ಚರಣದಲ್ಲಿ ಮಹಾತ್ಮ ಗಾಂಧಿ ಅವರ ಚಿತಾಭಸ್ಮವನ್ನು 1948ರಲ್ಲಿ ಮುಳುಗಿಸಿರುವ ಕಡಲ ತೀರದ ಲಿಪೊರ್ಡ್ ಪೈಯರ್ ನಲ್ಲಿಂದು ಮಹಾತ್ಮಗಾಂಧಿ ಅವರ ಫಲಕವನ್ನು ಅನಾವರಣಗೊಳಿಸಿರುವುದಾಗಿ ನರೇಂದ್ರಮೋದಿ ಟ್ವೀಟ್ ಮಾಡಿದ್ದಾರೆ.

“ಬಾಪು ಅವರ ಸಂದೇಶ ಜಾಗತಿಕವಾಗಿ ಪ್ರತಿಫಲಿಸುತ್ತದೆ, ಅವರ ಆಲೋಚನೆಗಳು ಮತ್ತು ಆದರ್ಶಗಳು ನಮಗೆ ಹೆಚ್ಚಿನ ಮಾನವೀಯತೆಗಾಗಿ ಕೆಲಸ ಮಾಡಲು ಪ್ರೇರೇಪಿಸುತ್ತವೆ,” ಅವರು ಟ್ವೀಟ್ ನಲ್ಲಿ ಹೇಳಿದ್ದಾರೆ.

ಮಹಾತ್ಮ ಗಾಂಧಿಯವರ ನೆಚ್ಚಿನ ಭಜನೆ ‘ವೈಷ್ಣವ್ ಜಾನ್ ಟೊ ತೆನೆ ಕಹೈ’ಯ ಸುಂದರ ಚಿತ್ರಣವನ್ನು ಈ ಸಂದರ್ಭದಲ್ಲಿ ಹಾಡಲಾಗಿತ್ತು.

1948 ರಲ್ಲಿ ಗಾಂಧಿಯವರ ಮರಣದ ನಂತರ, ಅವರ ಚಿತಾಭಸ್ಮವನ್ನು ಭಾರತದ ವಿವಿಧ ಭಾಗಗಳಿಗೆ ಮತ್ತು ಸಿಂಗಪುರ್ ಸೇರಿದಂತೆ ಜಗತ್ತಿನಲ್ಲಿ ಮುಳುಗಿಸುವುದಕ್ಕೆ ಕಳುಹಿಸಲಾಯಿತು.

ಇದಕ್ಕೂ ಮುನ್ನ ಯಮರೈಟ್ ಹಿರಿಯ ಸಚಿವ ಗೋ ಚೊಕ್ ಟಾಂಗ್ ಅವರೊಂದಿಗೆ ಮಾತುಕತೆ ನಡೆಸಿರುವುದಾಗಿ ಮೋದಿ ತಿಳಿಸಿದ್ದಾರೆ. ಮೂರು ರಾಷ್ಟ್ರಗಳ ಪ್ರವಾಸದ ಅಂಗವಾಗಿ ನರೇಂದ್ರಮೋದಿ ಇಂಡೊನೇಷ್ಯಾ, ಮಲೇಷ್ಯಾ ನಂತರ ಗುರುವಾರ ಸಿಂಗಾಪೂರಕ್ಕೆ ಭೇಟಿ ನೀಡಿದ್ದರು.

Leave A Reply

Your email address will not be published.