EBM News Kannada
Leading News Portal in Kannada

ಅತ್ಯಾಚಾರ ಪ್ರಕರಣ: ನಿರ್ಮಾಪಕ ಹಾರ್ವೆ ವೈನ್ಸ್ಟೈನ್ ಬಂಧನ

0
ನ್ಯೂಯಾರ್ಕ್:  ವಿವಾದಿತ ಹಾಲಿವುಡ್ ನಿರ್ಮಾಪಕ ಹಾರ್ವೆ ವೈನ್ಸ್ಟೈನ್ ಪೋಲೀಸರಿಗೆ ಶರಣಾಗಿದ್ದಾನೆ. ಖ್ಯಾತ ನಟಿಯರಾದ ಆಂಜೆಲಿನಾ ಜೂಲಿ, ಗ್ವಿನೆತ್ ಪಾಲ್ಟ್ರೋ, ಕಾರಾ ಡೆಲಿವಿಂಗ್ನೆ, ಸೇರಿ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಇವನ ಮೇಲಿತ್ತು.
ಸಮಾಜದಲ್ಲಿ ಮಹಿಳೆಯರು ಕೆಲಸ ಮಾಡುವ ಜಾಗದಲ್ಲಿ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದರ ವಿರುದ್ಧ ಮಹಿಳೆಯರೆಲ್ಲಾ ಸೇರಿ `ಮಿಟೂ’ ಚಳುವಳಿಯನ್ನು ಹಮ್ಮಿಕೊಂಡಿದ್ದರು.
ಮ್ಯಾನ್ ಹಟನ್ ಪ್ರಾಸಿಕ್ಯೂಷನ್ ನ್ಯಾಯಾಲಯವು ವೈನ್ಸ್ಟೈನ್ ವಿರುದ್ಧ ಪ್ರಥಮ ಪ್ರಕರಣದಲ್ಲಿ  ಮೊದಲ ಮತ್ತು ಮೂರನೇ ದರ್ಜೆಯ ಅತ್ಯಾಚಾರ ಆರೋಪ, ದ್ವಿತೀಯ ಪ್ರಕರಣದಲ್ಲಿ ಮೊದಲ ದರ್ಜೆ ಲೈಂಗಿಕ ಕಿರುಕುಳ ಆರೋಪ ಹೊರಿಸಿದೆ ಎಂದು ಸಿಎನ್ಎನ್ ವರದಿ ಮಾಡಿದೆ.
ಹಾರ್ವೆ ಈ ದಿನದ ಅಂತ್ಯಕ್ಕೆ ನ್ಯಾಯಾಲಯಕ್ಕೆ ಹಾಜರಾಗುವ ನಿರೀಕ್ಷೆ ಇದೆ.ಇದೇ ವೇಳೆ ಹಾರ್ವೆ ಜಾಮೀನಿಗಾಗಿ ಮಾತುಕತೆ ನಡೆದಿದ್ದು ಒಂದು ಮಿಲಿಯನ್ ಯುಎಸ್ ಡಾಲರ್ ನಗದು ನೀಡುವುದಕ್ಕೆ ಹಾಗೂ ಮೇಲ್ವಿಚಾರಣೆ ಸಾಧನವನ್ನು ಧರಿಸುವುದಕ್ಕೆ ಒಪ್ಪಿಗೆ ಸೂಚಿಸಿದಾನೆ. ಅಂತೆಯೇ ಈತ ವಿದೇಶಕ್ಕೆ ತೆರಳುವುದನ್ನು ನಿಷೇಧಿಸಲಾಗಿದ್ದು ಅವನ ಪಾಸ್ ಪೋರ್ಟ್ ನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಬೇಕಿದೆ  ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಹಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅನೇಕ ನಟಿಯರು ನಿಡಿದ ದೂರಿನ ಆಧಾರದಲ್ಲಿ ಇವನ ಬಂಧನವಾಗಿದೆ.
ವೈನ್ಸ್ಟೈನ್ ನಿಂದ ಲೈಂಗಿಕವಾಗಿ ದುರುಪಯೋಗಕ್ಕೀಡಾಗಿದ್ದ ಹಾಗು ಹಲ್ಲೆಗೊಳಗಾಗಿದ್ದ ಅನೇಕ ನಟಿಯರು ತಮ್ಮ ಅನುಭವವನ್ನು ಹೇಳಿಕೊಂಡಂತೆ ಪ್ರಬಲ ಅಥವಾ ಅಧಿಕಾರದಲ್ಲಿರುವ ಪುರುಷರಿಂಡ ಲೈಂಗಿಕ ಕಿರುಕುಳಕ್ಕೆ ಒಲಗಾದ ಪ್ರಪಂಚದಾದ್ಯಂತದ ಅನೇಕ ಮಹಿಳೆಯರು ಮಿಟೂ’ ಚಳವಳಿಯಲ್ಲಿ ಪಾಲ್ಗೊಂಡಿದ್ದರು.
ವೈನ್ಸ್ಟೈನ್ ಕಳೆದ ಹಲವಾರು ವರ್ಷಗಳಿ<ದಲೂ  ಚಿತ್ರ ತಾರೆಗಳಿಗೆ ಹಾಗು  ತನ್ನ ಒಡೆತನದಲ್ಲಿದ್ದ ಸಂಸ್ಥೆಯ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನಿಡುತ್ತಿದ್ದ. ಆ ನಂತರ ಅವರಿಗೆ ಹಣ ನೀಡುವುದರ ಮೂಲಕ ಅಥವಾ ಅವರನ್ನು ಬಲವಂತವಾಗಿ ಮೌನಕ್ಕೆ ಶರಣಗುವಂತೆ ಮಾಡುವ ಮೂಲಕ ಪ್ರಕರಣಗಳನ್ನು ಮುಚ್ಚಿ ಹಾಕುತ್ತಿಒದ್ದ ಎನ್ನುವ ಆರೋಪವಿದೆ. ಆದರೆ ಈ ಸಂಬಂಧ ನಿರ್ಮಾಪಕನ ಪರ ವಕೀಲರು ಪ್ರತಿಕ್ರಯಿಸಲು ನಿರಾಕರಿಸಿದ್ದಾರೆ.
Leave A Reply

Your email address will not be published.