ಅಮ್ಮಾನ್ : ದಂಗೆಕೋರರ ವಿರುದ್ಧ ಹೋರಾಡುತ್ತಿರುವ ಸಿರಿಯಾ ಸೇನೆಯನ್ನು ಬೆಂಬಲಿಸಲು ಇರಾನ್ ಬೆಂಬಲಿತ ಸಶಸ್ತ್ರ ಹೋರಾಟಗಾರರ ಗುಂಪು ಇರಾಕ್ ಮೂಲಕ ಸಿರಿಯಾ ಪ್ರವೇಶಿಸಿದ್ದು ಉತ್ತರ ಸಿರಿಯಾದತ್ತ ಮುಂದುವರಿದಿದ್ದಾರೆ ಎಂದು ಸಿರಿಯಾ ಸೇನಾಪಡೆಯ ಮೂಲಗಳು ಹೇಳಿವೆ.
ಇರಾಕ್ ಮೂಲದ(ಇರಾನ್ ಬೆಂಬಲಿತ) ಹಶ್ದ್ ಅಲ್‍ಶಾಬಿ ಹೋರಾಟಗಾರರ ಗುಂಪು ಅಲ್‍ಬುಕಮಲ್ ಕ್ರಾಸಿಂಗ್(ಗಡಿದಾಟು) ಮೂಲಕ ಸಿರಿಯಾ ಪ್ರವೇಶಿಸಿದ್ದು ಬಂಡುಕೋರರ ವಿರುದ್ಧ ಹೋರಾಡುತ್ತಿರುವ ನಮ್ಮ ಪಡೆಗಳಿಗೆ ಶಕ್ತಿ ತುಂಬಲಿದ್ದಾರೆ ಎಂದು ಸಿರಿಯಾ ಸೇನೆಯ ಉನ್ನತ ಅಧಿಕಾರಿಯನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.