EBM News Kannada
Leading News Portal in Kannada

ಗಿನಿಯಾದಲ್ಲಿ ಫುಟ್ಬಾಲ್ ಪಂದ್ಯದ ವೇಳೆ ನಡೆದ ಘರ್ಷಣೆಯಲ್ಲಿ ಹಲವರು ಮೃತ್ಯು: ವರದಿ

0


ಗಿನಿಯಾ: ಪಶ್ಚಿಮ ಆಫ್ರಿಕಾದ ಗಿನಿಯಾದ ಎರಡನೇ ಅತಿದೊಡ್ಡ ನಗರವಾದ ಎನ್ ಝೆರೆಕೋರೆಯಲ್ಲಿ ರವಿವಾರ ಫುಟ್ಬಾಲ್ ಪಂದ್ಯದ ವೇಳೆ ಘರ್ಷಣೆ ನಡೆದಿದ್ದು, ಸರಿಸುಮಾರು ಕನಿಷ್ಠ 100 ಮಂದಿ ಮೃತಪಟ್ಟಿರಬಹುದು ಎಂದು ಸ್ಥಳೀಯ ವೈದ್ಯರೋರ್ವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

2021ರ ದಂಗೆಯ ನಂತರ ಅಧಿಕಾರ ವಹಿಸಿಕೊಂಡ ಗಿನಿಯಾದ ಜುಂಟಾ ನಾಯಕ ಮಮಡಿ ಡೌಂಬೌಯಾ ಅವರ ಗೌರವಾರ್ಥವಾಗಿ ಆಯೋಜಿಸಲಾದ ಪಂದ್ಯಾವಳಿಯಲ್ಲಿ ಘರ್ಷಣೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಪಂದ್ಯದ ತೀರ್ಪಿಗೆ ಸಂಬಂಧಿಸಿ ವಿವಾದವಾಗಿ ಹಿಂಸಾಚಾರ ಸ್ಫೋಟಗೊಂಡಿದೆ. ಬಳಿಕ ಎನ್ ಝೆರೆಕೋರೆಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲಾಗಿದೆ ಎನ್ನಲಾಗಿದೆ.

ಘಟನೆಯಲ್ಲಿ ಸರಿಸುಮಾರು 100 ಮಂದಿ ಮೃತಪಟ್ಟಿದ್ದಾರೆ. ಸ್ಥಳೀಯ ಆಸ್ಪತ್ರೆಗಳು ಮೃತದೇಹಗಳಿಂದ ತುಂಬಿಕೊಂಡಿದೆ ಎಂದು ವೈದ್ಯರೋರ್ವರು ಮಾಹಿತಿ ನೀಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊಗಳಲ್ಲಿ ಕ್ರೀಡಾಂಗಣದ ಬಳಿ ಮೃತದೇಹಗಳು ಬಿದ್ದು ಕೊಂಡಿರುವುದು ಕಂಡು ಬಂದಿದೆ.



Leave A Reply

Your email address will not be published.