EBM News Kannada
Leading News Portal in Kannada

ಉಕ್ರೇನ್‍ನ ಎಲ್ವಿವ್ ನಗರದ ಮೇಲೆ ರಶ್ಯದ ದಾಳಿ : 7 ಮಂದಿ ಮೃತ್ಯು

0



ಕೀವ್ : ಪಶ್ಚಿಮ ಉಕ್ರೇನ್‍ನ ಐತಿಹಾಸಿಕ ನಗರ ಎಲ್ವಿವ್ ಮೇಲೆ ರಶ್ಯ ನಡೆಸಿದ ದಾಳಿಯಲ್ಲಿ ಮೂವರು ಮಕ್ಕಳ ಸಹಿತ 7 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

ಮಂಗಳವಾರ ತಡರಾತ್ರಿ ನಡೆದ ಕ್ಷಿಪಣಿ ದಾಳಿಯಲ್ಲಿ ಪೋಲ್ಯಾಂಡ್ ಗಡಿಯ ಸನಿಹದಲ್ಲಿರುವ ಎಲ್ವಿವ್ ನಗರದ ಐತಿಹಾಸಿಕ ಕೇಂದ್ರದಲ್ಲಿನ ಶಾಲೆಗಳು, ವೈದ್ಯಕೀಯ ಸೌಲಭ್ಯಗಳು ಮತ್ತು ಕಟ್ಟಡಗಳು, ಸ್ಥಳೀಯ ಪ್ರಾಮುಖ್ಯತೆಯ ಕನಿಷ್ಟ 7 ವಾಸ್ತುಶಿಲ್ಪದ ಕೇಂದ್ರಗಳಿಗೆ ಹಾನಿಯಾಗಿದೆ. ಕಟ್ಟಡಗಳೂ ಐತಿಹಾಸಿಕ ಪ್ರದೇಶದಲ್ಲಿ ಮತ್ತು ಯುನೆಸ್ಕೋ ಗುರುತಿಸಿದ ಬಫರ್ (ತಟಸ್ಥ) ವಲಯದಲ್ಲಿ ಇದ್ದ ಕಟ್ಟಡಗಳೂ ಹಾನಿಗೊಂಡಿವೆ ಎಂದು ವರದಿಯಾಗಿದೆ.

ಮೂವರು ಮಕ್ಕಳ ಸಹಿತ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದು 40 ಮಂದಿ ಗಾಯಗೊಂಡಿದ್ದಾರೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಆಂತರಿಕ ವ್ಯವಹಾರಗಳ ಸಚಿವ ಇಗೋರ್ ಕ್ಲಿಮೆಂಕೊ ಹೇಳಿದ್ದಾರೆ. ಕ್ಷಿಪಣಿಗಳ ಸುರಿಮಳೆಯಾಗುತ್ತಿದ್ದಂತೆಯೇ ಸೈರನ್‍ಗಳು ಮೊಳಗಿದವು ಮತ್ತು ಬಾಂಬ್ ರಕ್ಷಣೆ ವ್ಯವಸ್ಥೆಯಲ್ಲಿ ಆಶ್ರಯ ಪಡೆಯುವಂತೆ ನಗರದ ನಿವಾಸಿಗಳಿಗೆ ಸಲಹೆ ನೀಡಿರುವುದಾಗಿ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

Leave A Reply

Your email address will not be published.