EBM News Kannada
Leading News Portal in Kannada

ಬಾಂಗ್ಲಾದ ತೀವ್ರವಾದಿಗಳು ಪಾಕಿಸ್ತಾನವನ್ನು ಪ್ರೀತಿಸಿ, ಭಾರತವನ್ನು ದ್ವೇಷಿಸುತ್ತಾರೆ : ಲೇಖಕಿ ತಸ್ಲಿಮಾ ನಸ್ರೀನ್ ಹೇಳಿಕೆ

0



ಢಾಕಾ : ಬಾಂಗ್ಲಾದೇಶದ ತೀವ್ರವಾದಿಗಳು ಪಾಕಿಸ್ತಾನವನ್ನು ಪ್ರೀತಿಸುತ್ತಾರೆ ಮತ್ತು ಭಾರತವನ್ನು ದ್ವೇಷಿಸುತ್ತಾರೆ. ಆದ್ದರಿಂದಲೇ ಅವರು ಭಾರತದ ಉತ್ಪನ್ನಗಳನ್ನು ಬಹಿಷ್ಕರಿಸಲು ದೇಶದ ಜನತೆಯನ್ನು ಆಗ್ರಹಿಸುತ್ತಿದ್ದಾರೆ ಎಂದು ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನಾ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ `ಎಕ್ಸ್’ನಲ್ಲಿ ತಸ್ಲಿಮಾ ಬಾಂಗ್ಲಾದ ಪ್ರಜೆಯೊಬ್ಬ ಒಂದು ಕೈಯಲ್ಲಿ ಬಾಂಗ್ಲಾದ ಧ್ವಜ ಮತ್ತೊಂದು ಕೈಯಲ್ಲಿ ಪಾಕಿಸ್ತಾನದ ಧ್ವಜವನ್ನು ಹಿಡಿದಿರುವ ಚಿತ್ರವನ್ನೂ ಪೋಸ್ಟ್ ಮಾಡಿದ್ದಾರೆ. `1971ರಲ್ಲಿ ಪಾಕಿಸ್ತಾನ ನಮ್ಮನ್ನು ಕೊಂದಿತ್ತು ಮತ್ತು ಭಾರತ ನಮ್ಮನ್ನು ರಕ್ಷಿಸಿತ್ತು ಎಂಬುದು ಅವರಿಗೆ ತಿಳಿದಿದೆಯೇ? ಮುಸ್ಲಿಂ ಭ್ರಾತೃತ್ವದಲ್ಲಿ ನಂಬಿಕೆ ಇಡಲು ಅವರನ್ನು ಬ್ರೈನ್‍ವಾಶ್ ಮಾಡಲಾಗಿದೆ’ ಎಂದು ಮತ್ತೊಂದು ಪೋಸ್ಟ್ ಮಾಡಿರುವ ಅವರು ವ್ಯಕ್ತಿಯೊಬ್ಬ `ನಿಮ್ಮ ಮಕ್ಕಳಿಗೆ ಭಾರತವನ್ನು ದ್ವೇಷಿಸುವುದನ್ನು ಕಲಿಸಿ’ ಎಂಬ ಬರಹವುಳ್ಳ ಟಿ-ಶರ್ಟ್ ಧರಿಸಿರುವ ಫೋಟೊವನ್ನು ಲಗತ್ತಿಸಿದ್ದಾರೆ.

`ಬಾಂಗ್ಲಾದೇಶದ ಜಮಾತೆ ಇಸ್ಲಾಮಿ `ನಿಮ್ಮ ಮಕ್ಕಳಿಗೆ ಭಾರತವನ್ನು ದ್ವೇಷಿಸುವುದನ್ನು ಕಲಿಸಿ’ ಎಂಬ ಬರಹವುಳ್ಳ ಟಿ-ಶರ್ಟ್ ವಿತರಿಸಿ ಬಡಜನರಿಗೆ ನೆರವಾಗುತ್ತಿದೆ. ತೀವ್ರವಾದಿಗಳು ಭಾರತದ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ. ಬಾಂಗ್ಲಾದಲ್ಲಿ ಭಾರತ ವಿರೋಧಿ, ಹಿಂದು ವಿರೋಧಿ ತೀವ್ರವಾದಿಗಳ ಸಂಖ್ಯೆ ಹೆಚ್ಚುತ್ತಿದೆ’ ಎಂದು ತಸ್ಲೀಮಾ ಉಲ್ಲೇಖಿಸಿದ್ದಾರೆ.

Leave A Reply

Your email address will not be published.