ಗಾಝಾ: ದಕ್ಷಿಣ ಗಾಝಾದ ನಾಸೆರ್ ಮೆಡಿಕಲ್ ಕಾಂಪ್ಲೆಕ್ಸ್‍ನ ಬಳಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಟ 70 ಮಂದಿ ಮೃತಪಟ್ಟಿರುವುದಾಗಿ `ಡಾಕ್ಟರ್ಸ್ ವಿತೌಟ್ ಬಾರ್ಡರ್’ ಎನ್‍ಜಿಒ ಸಂಸ್ಥೆ ಸೋಮವಾರ ಹೇಳಿದೆ.
ಗಾಝಾದಲ್ಲಿನ ಇಂಡೊನೇಶ್ಯಾ ಆಸ್ಪತ್ರೆಯ ಬಳಿ ಇಸ್ರೇಲ್‍ನ ಟ್ಯಾಂಕ್ ಮತ್ತು ಸೇನಾ ವಾಹನಗಳು ಜಮಾಯಿಸುತ್ತಿವ ಇಸ್ರೇಲ್ ಪಡೆಗಳು ಆಸ್ಪತ್ರೆಯನ್ನು ಗುರಿಯಾಗಿಸಿ ಫಿರಂಗಿ ದಾಳಿ ಮುಂದುವರಿಸಿವೆ. ಆಸ್ಪತ್ರೆಯ ಸುತ್ತಮುತ್ತ ಯಾವುದೇ ವ್ಯಕ್ತಿಯ ಚಲನೆಯನ್ನು ಕಂಡರೂ ಗುಂಡಿನ ದಾಳಿ ನಡೆಸುತ್ತಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ನ.20ರ ರಾತ್ರಿ ನಡೆಸಿದ ವೈಮಾನಿಕ ದಾಳಿಯಲ್ಲಿ ಮೂವರು ಹಮಾಸ್ ಕಮಾಂಡರ್ ಹತರಾಗಿದ್ದಾರೆ ಎಂದು ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ಹೇಳಿದೆ.
ಈ ಮಧ್ಯೆ, ಅಲ್-ಶಿಫಾ ಆಸ್ಪತ್ರೆಯಲ್ಲಿ ಒತ್ತೆಯಾಳುಗಳನ್ನು ಇರಿಸಿರುವ ಹಾಗೂ ಆಸ್ಪತ್ರೆಯೊಳಗೆ ಹೊಸ ಸುರಂಗ ಪತ್ತೆಯಾಗಿದೆ ಎಂದು ವೀಡಿಯೊ ತುಣುಕನ್ನು ಐಡಿಎಫ್ ಬಿಡುಗಡೆಗೊಳಿಸಿದೆ. ಆದರೆ ಇಸ್ರೇಲ್ ಹೇಳಿಕೆಯನ್ನು ನಿರಾಕರಿಸಿರುವ ಹಮಾಸ್, ಇದು ಮತ್ತೊಂದು ಸುಳ್ಳಿನ ಸರಮಾಲೆ ಎಂದು ಟೀಕಿಸಿದೆ.