EBM News Kannada
Leading News Portal in Kannada

ಕೋವಿಡ್ ಸಾಂಕ್ರಾಮಿಕ ಉಲ್ಬಣ: ಲಂಡನ್ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿ ಕೊರತೆ

0



ಲಂಡನ್: ಕೋವಿಡ್-19 ಸಾಂಕ್ರಾಮಿಕ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಬ್ರಿಟನ್ ನ ಅತ್ಯಂತ ದಟ್ಟಣೆಯ ವಿಮಾನ ನಿಲ್ದಾಣಗಳ ಪೈಕಿ ಎರಡನೇ ಸ್ಥಾನದಲ್ಲಿರುಯವ ಗ್ಯಾಟ್ವಿಕ್ ವಿಮಾನ ನಿಲ್ದಾಣದಲ್ಲಿ ಹಲವು ವಿಮಾನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಫೋರ್ಬ್ಸ್ ವರದಿ ಮಾಡಿದೆ.

ವಾರಾಂತ್ಯದಲ್ಲಿ ಸುಮಾರು 40 ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ವಾರದ ಇತರ ದಿನಗಳಲ್ಲಿ ಕೂಡಾ ರನ್ ವೇಗೆ ಬರುವ ಹಾಗೂ ಇಲ್ಲಿಂದ ಹೋಗುವ ವಿಮಾನಗಳ ಸಂಖ್ಯೆಯನ್ನು ಕೂಡಾ ಕಡಿತಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಸಿಇಓ ಸ್ಟಿವರ್ಟ್ ವಿನ್ಗೇಟ್ ಹೇಳಿಕೆ ನೀಡಿದ್ದಾರೆ.

ಮುಂದಿನ ಭಾನುವಾರದ ವರೆಗೆ ಆಗಮನ ಮತ್ತು ನಿರ್ಗಮನ ಸೇರಿ ಪ್ರತಿದಿನ 800 ವಿಮಾನಗಳ ಮಿತಿಯನ್ನು ವಿಧಿಸಲಾಗಿದೆ. ಈ ದೈನಿಕ ಗರಿಷ್ಠಮಿತಿಯಿಂದಾಗಿ ಕೊನೆ ಕ್ಷಣದಲ್ಲಿ ವಿಮಾನಗಳು ರದ್ದಾಗುವ ಮತ್ತು ಪ್ರಯಾಣಿಕರಿಗೆ ವಿಳಂಬವಾಗುವ ಸ್ಥಿತಿಗೆ ಕಾರಣವಾಗಲಿದ್ದು, ಸದ್ಯದಲ್ಲೇ ರಾಷ್ಟ್ರೀಯ ವಾಯು ಸಂಚಾರ ಸೇವೆಗಳ ವಿಭಾಗ (ಎನ್ಎಟಿಎಸ್) ಸದ್ಯದಲ್ಲೇ ಸಹಜ ಸ್ಥಿತಿಗೆ ಬರಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್ 29ರಂದು ಗರಿಷ್ಠ ಸಂಖ್ಯೆಗಳ ವಿಮಾನಗಳು ರದ್ದಾಗಲಿವೆ. ಅಂದು 33 ವಿಮಾನಗಳ ಸಂಚಾರ ರದ್ದಾಗಿದ್ದು, ಕೋವಿಡ್-19 ಸಾಂಕ್ರಾಮಿಕ ಸೇರಿದಂತೆ ಹಲವು ಅಸ್ವಸ್ಥತೆಗಳಿಂದ ಶೇಕಡ 30ರಷ್ಟು ಸಿಬ್ಬಂದಿ ರಜೆಯಲ್ಲಿದ್ದಾರೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

ಹಲವು ವೈದ್ಯಕೀಯ ಕಾರಣಗಳಿಂದಾಗಿ ವಿಮಾನ ನಿಲ್ದಾಣದ ಒಳಹರಿವು ಮತ್ತು ಹೊರ ಹರಿವನ್ನು ಸಹಜವಾಗಿ ನಿರ್ವಹಿಸಲು ಸಾಧ್ಯವಾಗದೇ ಇರುವುದಕ್ಕೆ ಕ್ಷಮೆ ಯಾಚಿಸುವುದಾಗಿ ಎನ್ಎಟಿಎಸ್ ಹೇಳಿದೆ.

Leave A Reply

Your email address will not be published.